ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಸ್ಟಂಟ್ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉಪೇಂದ್ರ-ಪ್ರಿಯಾಂಕ ದಂಪತಿ ಪುತ್ರ ಆಯುಷ್ ಈಗಷ್ಟೇ 15 ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಅಪ್ಪ-ಅಮ್ಮನ ರೂಪ ಹೊತ್ತುಕೊಂಡು ಬಂದಿರುವ ಆಯುಷ್ ಭವಿಷ್ಯದಲ್ಲಿ ಸ್ಟಾರ್ ಆಗುವ ಭರವಸೆ ಮೂಡಿಸಿದ್ದಾರೆ.
ಇದೀಗ ಆಯುಷ್ ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದು, ಸದ್ಯಕ್ಕೆ ಅವರ ಬ್ಯಾಕ್ ಫ್ಲಿಪ್ ಜಂಪ್ ಒಂದು ಭರ್ಜರಿ ಸದ್ದು ಮಾಡುತ್ತಿದೆ. ಇದನ್ನು ನೋಡಿ ನೆಟ್ಟಿಗರು ಭವಿಷ್ಯದಲ್ಲಿ ಒಳ್ಳೆಯ ಸ್ಟಾರ್ ಆಗುತ್ತೀಯಾ ಎಂದು ಹೊಗಳಿದ್ದಾರೆ.