Select Your Language

Notifications

webdunia
webdunia
webdunia
webdunia

ಮಾಲಾಶ್ರೀ ಬಳಿಕ ಬ್ಯುಸಿಯೆಸ್ಟ್ ನಟಿಯಾಗಿದ್ದರು ಶ್ರುತಿ

ಮಾಲಾಶ್ರೀ ಬಳಿಕ ಬ್ಯುಸಿಯೆಸ್ಟ್ ನಟಿಯಾಗಿದ್ದರು ಶ್ರುತಿ
ಬೆಂಗಳೂರು , ಭಾನುವಾರ, 18 ಸೆಪ್ಟಂಬರ್ 2022 (08:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಮತ್ತೊಬ್ಬ ಸ್ಟಾರ್ ಕಲಾವಿದೆಯ ಹುಟ್ಟುಹಬ್ಬ. ವಿಷ್ಣುವರ್ಧನ್, ಉಪೇಂದ್ರ ಜೊತೆಗೆ ನಟಿ ಶ್ರುತಿ ಕೃಷ್ಣಗೂ ಇಂದೇ ಜನ್ಮದಿನ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾದಲ್ಲಿ ತಂಗಿ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರುತಿ ಬಳಿಕ ಸ್ಯಾಂಡಲ್ ವುಡ್ ನ ನಂ.1 ಹೀರೋಯಿನ್ ಆಗಿ ಮೆರೆದರು. ತಂಗಿಯಾಗಿ, ಸೊಸೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ ಹೆಂಗಳೆಯರ ಕಣ್ಣಲ್ಲಿ ನೀರು ತರಿಸುವಂತೆ ಅಭಿನಯಿಸುತ್ತಿದ್ದ ಸಹಜ ಕಲಾವಿದೆ ಶ್ರುತಿ.

ಒಂದು ಕಾಲದಲ್ಲಿ ಮಾಲಾಶ್ರೀ ಬ್ಯುಸಿಯೆಸ್ಟ್ ನಟಿ. ಅವರ ಬಳಿಕ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಎಂದರೆ ಶ್ರುತಿ ಆಗಿದ್ದರು. ರಾಮ್ ಕುಮಾರ್, ಶಶಿಕುಮಾರ್, ಸುನಿಲ್, ರಮೇಶ್ ಅರವಿಂದ್ ಮುಂತಾದ ಕಲಾವಿದರ ಜೊತೆಗೆ ಜನಪ್ರಿಯ ಜೋಡಿಯಾಗಿ ಕನ್ನಡಿಗರ ಮನ ಸೆಳೆದಿದ್ದ ಶ್ರುತಿ ಇಂದು 47 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ವಿಶೇಷ ಮೆರುಗು ತಂದ ಅಭಿಮಾನಿಗಳು