ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಜನ್ಮದಿನ ನಾಳೆಯಿದ್ದು, ಅಭಿಮಾನಿಗಳು ಅವರ ಮನೆಯತ್ತ ಬರುವುದು ಸಹಜ.
ಈಗಾಗಲೇ ತಮ್ಮ ಮನೆ ಮುಂದೆ ಬರುವ ಅಭಿಮಾನಿಗಳಿಗೆ 18 ಪದಗಳಲ್ಲಿ ಒಳ್ಳೆಯ ವಿಚಾರವೊಂದನ್ನು ಬರೆದು ತರುವಂತೆ ಉಪೇಂದ್ರ ಮನವಿ ಮಾಡಿದ್ದರು.
ಇದೀಗ ಮತ್ತೆ ಅಭಿಮಾನಿಗಳಿಗೆ ಉಪೇಂದ್ರ ಮನವಿ ಮಾಡಿದ್ದು, ಹಾರ, ಕೇಕ್, ಬೊಕ್ಕೆ, ಗಿಫ್ಟ್ ಇತ್ಯಾದಿಗಳಿಗೆಲ್ಲಾ ಅವಕಾಶವಿಲ್ಲ. ಫೋಟೋಗೆ ಮಾತ್ರ ಅವಕಾಶವಿರುತ್ತದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!