Publish Date: Mon, 19 Sep 2022 (19:39 IST)
Updated Date: Mon, 19 Sep 2022 (19:41 IST)
ಬೆಂಗಳೂರು: ಪತಿ ಪುನೀತ್ ರಾಜ್ ಕುಮಾರ್ ತೀರಿಕೊಂಡ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಿಆರ್ ಕೆ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಪುನೀತ್ ಕನಸಿನಂತೆ ಹೊಸ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಅಶ್ವಿನಿ ತಮ್ಮ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಮತ್ತೊಂದು ಸಿನಿಮಾ ಮುಗಿಸಿದ್ದಾರೆ.
ಆಶಿಕಾ ರಂಗನಾಥ್ ನಾಯಕಿಯಾಗಿರುವ ಒ2 ಎಂಬ ಮೆಡಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾ ಈಗ ಚಿತ್ರೀಕರಣ ಮುಗಿಸಿದೆ. ಈ ಸಿನಿಮಾಗೆ ಪಿಆರ್ ಕೆ ಬ್ಯಾನರ್ ನಲ್ಲಿ ಅಶ್ವಿನಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಚಿತ್ರಕ್ಕೆ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಆಕ್ಷನ್ ಕಟ್ ಹೇಳಿದ್ದಾರೆ.