Select Your Language

Notifications

webdunia
webdunia
webdunia
webdunia

ಕಾಂತಾರ ಸಿನಿಮಾವನ್ನು ಪುನೀತ್ ಮಾಡಬೇಕಿತ್ತು! ಆದ್ರೆ ರಿಷಬ್ ಹೆಸರು ಸೂಚಿಸಿದ್ದು ಯಾರು?

ಕಾಂತಾರ ಸಿನಿಮಾವನ್ನು ಪುನೀತ್ ಮಾಡಬೇಕಿತ್ತು! ಆದ್ರೆ ರಿಷಬ್ ಹೆಸರು ಸೂಚಿಸಿದ್ದು ಯಾರು?
ಬೆಂಗಳೂರು , ಮಂಗಳವಾರ, 20 ಸೆಪ್ಟಂಬರ್ 2022 (10:00 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಸೆಪ್ಟೆಂಬರ್ 30 ರಂದು ರಿಲೀಸ್ ಆಗಲಿದೆ.

ಈ ಸಿನಿಮಾ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಬಹಿರಂಗಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದು, ಈ ವೇಳೆ ಕಾಂತಾರ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತು ಎಂದಿದ್ದಾರೆ.

ಕಾಂತಾರ ಸಿನಿಮಾವನ್ನು ಮೊದಲು ಪುನೀತ್ ಮಾಡಬೇಕೆಂದಿತ್ತು. ಅವರಿಗೆ ಕತೆ ಹೇಳಿದಾಗ ಅವರಿಗೂ ಇಷ್ಟವಾಗಿತ್ತು. ಆದರೆ ಡೇಟ್ ಸಮಸ್ಯೆಯಿಂದಾಗಿ ಈ ಸಿನಿಮಾವನ್ನು ರಿಷಬ್ ಶೆಟ್ಟಿಗೆ ಸೂಚಿಸಿದ್ದು ಸ್ವತಃ ಪುನೀತ್ ಎಂಬ ಮಾಹಿತಿ ಕಾರ್ತಿಕ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಯ ಮೊಬೈಲ್ ಕಿತ್ತುಕೊಂಡ ನಟ ರಾಣಾ ದಗ್ಗುಬಟ್ಟಿ