Publish Date: Thu, 22 Sep 2022 (08:40 IST)
Updated Date: Thu, 22 Sep 2022 (08:53 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಟೀಸರ್ ಭಾರೀ ಹಿಟ್ ಆಗಿತ್ತು. ಇದು ಚಿತ್ರತಂಡದ ಉತ್ಸಾಹ ಹೆಚ್ಚಿಸಿದೆ.
ಕಬ್ಜ ಸಿನಿಮಾ ಟೀಸರ್ ವೀಕ್ಷಿಸಿದ ಪ್ರೇಕ್ಷಕರು ಕೆಜಿಎಫ್ ನಂತೇ ಇದು ಸೂಪರ್ ಹಿಟ್ ಆಗಲಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಇದರ ಬೆನ್ನಲ್ಲೇ ನಿರ್ದೇಶಕ ಆರ್. ಚಂದ್ರು ಎರಡನೇ ಭಾಗ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಈಗಾಗಲೇ ಎರಡನೇ ಭಾಗಕ್ಕಾಗುವಷ್ಟು ಕತೆ ರೆಡಿ ಮಾಡಿಕೊಳ್ಳಲಾಗಿದೆ ಎಂದು ಚಂದ್ರು ಹೇಳಿದ್ದು, ಕಬ್ಜ ಎರಡನೇ ಭಾಗವೂ ನಿರ್ಮಾಣವಾಗುವುದು ಖಚಿತವಾಗಿದೆ.