Publish Date: Sun, 25 Jul 2021 (12:50 IST)
Updated Date: Sun, 25 Jul 2021 (10:04 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಮತ್ತೆ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಪೊಗರು ಸಿನಿಮಾ ಬಳಿಕ ಧ್ರುವ ಎರಡನೇ ಬಾರಿ ತಮ್ಮ ಕೇಶ ವಿನ್ಯಾಸ ಬದಲಿಸಿಕೊಂಡಿದ್ದಾರೆ.
Photo Courtesy: Instagram
ಪೊಗರು ಸಿನಿಮಾದಲ್ಲಿ ಉದ್ದನೆಯ ದಾಡಿ ಬಿಟ್ಟುಕೊಂಡಿದ್ದ ಧ್ರುವ ಬಳಿಕ ತಲೆ ಕೂದಲು ಸಣ್ಣದಾಗಿ ಕತ್ತರಿಸಿ, ಗಡ್ಡ, ಮೀಸೆಗೂ ಕತ್ತರಿ ಹಾಕಿ ಸಣ್ಣ ಹುಡುಗನ ರೀತಿ ಕಾಣಿಸಿಕೊಂಡಿದ್ದರು.
ಇದೀಗ ಚಿಕ್ಕದಾಗಿ ಮೀಸೆ, ಗಡ್ಡ ಬಿಟ್ಟುಕೊಂಡು ಹೊಸ ಲುಕ್ ನಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾನದಲ್ಲಿ ಪ್ರಕಟಿಸಿರುವ ಧ್ರುವ ತಮ್ಮ ಮುಂದಿನ ಸಿನಿಮಾಗೆ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ.