ಬೆಂಗಳೂರು: ಲಾಕ್ ಡೌನ್ ಮುಗಿಯುತ್ತಿದ್ದಂತೇ ಥಿಯೇಟರ್ ತೆರೆಯಲು ಅವಕಾಶ ಸಿಕ್ಕ ಬೆನ್ನಲ್ಲೇ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿತ್ತು.
ಸೆಪ್ಟೆಂಬರ್ 10 ರಂದು ಭಜರಂಗಿ 2 ಸಿನಿಮಾ ರಿಲೀಸ್ ಆಗಲಿದೆ. ಇದೀಗ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿರುವ ಸಲಗ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಗಸ್ಟ್ 20 ಕ್ಕೆ ಸಲಗ ರಿಲೀಸ್ ಆಗುವುದು ಪಕ್ಕಾ ಆಗಿದೆ.
ಇದೀಗ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ದಿನಾಂಕ ಪ್ರಕಟವಾಗುವುದು ಬಾಕಿಯಿದೆ.