Publish Date: Sat, 24 Jul 2021 (10:05 IST)
Updated Date: Sat, 24 Jul 2021 (10:05 IST)
ಬೆಂಗಳೂರು: ನಟಿ ಮೇಘನಾ ಸರ್ಜಾ ಪತಿಯ ಅಗಲುವಿಕೆಯ ನಂತರ ಇದೇ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದ್ದಾರೆ.
ಚಿರು ಸರ್ಜಾ ಸಾವಿನ ಬಳಿಕ, ಜ್ಯೂನಿಯರ್ ಚಿರುವಿಗೆ ತಾಯಿಯಾದ ಬಳಿಕ ಮೇಘನಾ ನಟನೆಯಿಂದ ದೂರವೇ ಉಳಿದಿದ್ದರು. ಆದರೆ ಜ್ಯೂನಿಯರ್ ಚಿರುಗೆ 9 ತಿಂಗಳು ತುಂಬಿದ ದಿನ ಕ್ಯಾಮರಾ ಎದುರಿಸಿರುವ ವಿಚಾರವನ್ನು ಹೇಳಿಕೊಂಡಿದ್ದರು.
ಇದರಿಂದಾಗಿ ಮೇಘನಾ ಮತ್ತೆ ಸಿನಿಮಾಗೆ ಬರುತ್ತಾರೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಮೇಘನಾ ಈಗ ಶೂಟಿಂಗ್ ಮಾಡಿರುವುದು ಸಿನಿಮಾಗೆ ಅಲ್ಲ, ಬದಲಾಗಿ ಜಾಹೀರಾತಿನ ಚಿತ್ರೀಕರಣಕ್ಕೆ. ಆದರೆ ಮುಂದೊಂದು ದಿನ ಖಂಡಿತಾ ಸಿನಿಮಾಗೆ ಮರಳುವುದು ಖಂಡಿತಾ ಎಂದು ಖಾತ್ರಿಯಾಗಿದೆ.