Select Your Language

Notifications

webdunia
webdunia
webdunia
webdunia

ಅಣ್ಣ ಚಿರು ಸರ್ಜಾರನ್ನು ಮಣ್ಣು ಮಾಡುವ ಮೊದಲು ಧ್ರುವ ಸರ್ಜಾ ಮಾಡಿದ ಈ ಕೆಲಸ ಈಗ ವೈರಲ್

ಅಣ್ಣ ಚಿರು ಸರ್ಜಾರನ್ನು ಮಣ್ಣು ಮಾಡುವ ಮೊದಲು ಧ್ರುವ ಸರ್ಜಾ ಮಾಡಿದ ಈ ಕೆಲಸ ಈಗ ವೈರಲ್
ಬೆಂಗಳೂರು , ಗುರುವಾರ, 11 ಜೂನ್ 2020 (09:54 IST)
ಬೆಂಗಳೂರು: ಮೊನ್ನೆ ಭಾನುವಾರ ಅಕಾಲಿಕವಾಗಿ ನಿಧನರಾದ ನಟ ಚಿರಂಜೀವಿ ಸರ್ಜಾರನ್ನು ಮಣ್ಣು ಮಾಡುವ ಕೊನೆ ಗಳಿಗೆಯಲ್ಲಿ ಸಹೋದರ ಧ್ರುವ ಸರ್ಜಾ ಮಾಡಿದ ಕೆಲಸವೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಧ್ರುವ-ಚಿರು ಪರಸ್ಪರ ಸಹೋದರರಿಂತಿರದೇ ಗೆಳೆಯರಂತಿದ್ದರು. ಹೀಗಾಗಿ ಚಿರು ತೀರಿಕೊಂಡಾಗ ಧ್ರುವ ದುಃಖ ಎಲ್ಲೆ ಮೀರಿತ್ತು. ಅಣ್ಣನನ್ನು ಮಣ್ಣಿನಲ್ಲಿಡುವ ಕಾರ್ಯಕ್ಕೆ ತಾವೇ ಕೈ ಜೋಡಿಸಿದ ಧ್ರುವ ಕೊನೇ ಗಳಿಗೆಯಲ್ಲಿ ತಮ್ಮ ಕತ್ತಿನಲ್ಲಿದ್ದ ಆಂಜನೇಯನ ಲಾಕೆಟ್ ಇದ್ದ ಚಿನ್ನದ ಸರವನ್ನು ಚಿರು ಮೃತದೇಹದ ಮೇಲಿರಿಸಿದ್ದರು.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಸಾವಿನಲ್ಲೂ ಅಣ್ಣನನ್ನು ಏಕಾಂಗಿಯಾಗಿ ಕಳುಹಿಸದೇ ಇರಲು ಧ‍್ರುವ ಪ್ರಯತ್ನಿಸಿದ್ದಾರೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರು ಸರ್ಜಾ ಸಾವಿನ ಬಳಿಕ ಮೊದಲ ಬಾರಿಗೆ ಸಂದೇಶ ಬರೆದುಕೊಂಡ ಅರ್ಜುನ್ ಸರ್ಜಾ