Select Your Language

Notifications

webdunia
webdunia
webdunia
webdunia

ಚಿರಂಜೀವಿ ಸರ್ಜಾ ಒಪ್ಪಿಕೊಂಡಿದ್ದ ಸಿನಿಮಾಗಳು ಯಾವುವು ಗೊತ್ತಾ?

ಚಿರಂಜೀವಿ ಸರ್ಜಾ ಒಪ್ಪಿಕೊಂಡಿದ್ದ ಸಿನಿಮಾಗಳು ಯಾವುವು ಗೊತ್ತಾ?
ಬೆಂಗಳೂರು , ಮಂಗಳವಾರ, 9 ಜೂನ್ 2020 (10:01 IST)
ಬೆಂಗಳೂರು: ಅಕಾಲಿಕವಾಗಿ ನಿಧನರಾದ ನಟ ಚಿರಂಜೀವಿ ಸರ್ಜಾ ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದವು. ಅವರು ಒಪ್ಪಿಕೊಂಡಿದ್ದ ಸಿನಿಮಾಗಳು ಯಾವುವು ಗೊತ್ತಾ?


ಚಿರಂಜೀವಿ ನಟಿಸಿ ಬಿಡುಗಡೆಯಾಗಿದ್ದ ಕೊನೆಯ ಸಿನಿಮಾ ಶಿವಾರ್ಜುನ. ದುರದೃಷ್ಟವಶಾತ್ ಈ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲೇ ಲಾಕ್ ಡೌನ್ ಕೂಡಾ ಘೋಷಣೆಯಾಗಿ ಸಿನಿಮಾ ಅಷ್ಟೊಂದು ಸುದ್ದಿ ಮಾಡಲಿಲ್ಲ.

ಇದಲ್ಲದೆ ರಾಜಮಾರ್ತಾಂಡ ಎಂಬ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿದ್ದವು. ಇದಲ್ಲದೆ ಒಟ್ಟು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ ಅದು ಇನ್ನೂ ಪ್ರಾರಂಭವಾಗಿರಲಿಲ್ಲ. ಏಪ್ರಿಲ್, ರಣಂ, ಕ್ಷತ್ರಿಯ ಎಂಬ ಮೂರು ಸಿನಿಮಾಗಳು ಚಿರು ಸರ್ಜಾ ಕೈಯಲ್ಲಿದ್ದವು. ಆದರೆ ಈ ಸಿನಿಮಾಗಳು ಯಾವುವೂ ಪೂರ್ತಿಯಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪಿದ ಸ್ಯಾಂಡಲ್ ವುಡ್ ನಟರು