Publish Date: Wed, 10 Jun 2020 (09:55 IST)
Updated Date: Wed, 10 Jun 2020 (09:58 IST)
ಬೆಂಗಳೂರು: ಅಳಿಯ ಚಿರಂಜೀವ ಸರ್ಜಾ ಅಕಾಲಿಕ ಮರಣದ ಬಳಿಕ ಮಾವ ಅರ್ಜುನ್ ಸರ್ಜಾ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.
ಚಿರು ಸರ್ಜಾ ಸಾವಿಗೀಡಾದ ಸುದ್ದಿ ಕೇಳಿಬರುತ್ತಿದ್ದಂತೇ ತಮ್ಮ ಫೇಸ್ ಬುಕ್ ಪ್ರೊಫೈಲ್ ಪುಟ, ಕವರ್ ಪೇಜ್ ನ್ನು ದುಃಖ ಸೂಚಕವಾಗಿ ಕಪ್ಪು ಬಣ್ಣಕ್ಕೆ ಪರಿವರ್ತನೆ ಮಾಡಿದ್ದ ಅರ್ಜುನ್ ಸರ್ಜಾ ಇದೇ ಮೊದಲ ಬಾರಿಗೆ ಚಿರು ಬಗ್ಗೆ ಬರೆದುಕೊಂಡಿದ್ದಾರೆ.
ಚಿರು ಜತೆಗಿನ ಸಂತೋಷದ ಕ್ಷಣದ ಫೋಟೋವೊಂದನ್ನು ತಮ್ಮ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿರುವ ಅರ್ಜುನ್ ಸರ್ಜಾ ‘ಐ ಮಿಸ್ ಮೈ ಬಾಯ್’ ಎಂದು ಬರೆದುಕೊಂಡಿದ್ದಾರೆ. ಅವರ ಈ ಸಂದೇಶಕ್ಕೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.