Publish Date: Tue, 14 Dec 2021 (11:29 IST)
Updated Date: Tue, 14 Dec 2021 (11:31 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇಂದು ಈ ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ.
ಕೈಯಲ್ಲಿ ಸದಾ ಎಣ್ಣೆ ಬಾಟ್ಲು, ಸುತ್ತಮುತ್ತ ಫ್ರೆಂಡ್ಸ್, ಮನೆಯಲ್ಲಿ ಮುದ್ದಿನ ಮಗ, ಪಕ್ಕದಲ್ಲೊಬ್ಬಳು ಪ್ರೇಯಸಿ. ಇದು ಬಡವ ರಾಸ್ಕಲ್ ನಲ್ಲಿ ಧನಂಜಯ್ ಅವತಾರ.
ಟ್ರೈಲರ್ ನಲ್ಲಿ ಧನಂಜಯ್ ಅವತಾರ ನೋಡಿ ಜನ ಫಿದಾ ಆಗಿದ್ದಾರೆ. ಮತ್ತೊಂದು ಧನಂಜಯ್ ಶೈಲಿಯ ಸಿನಿಮಾ ನಿಮ್ಮ ಎದುರಿಗೆ ಬರುವುದು ಗ್ಯಾರಂಟಿ ಎನಿಸುತ್ತದೆ. ಡಿಸೆಂಬರ್ 24 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಸದ್ಯಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ವೀಕ್ಷಿಸಬಹುದು.