Select Your Language

Notifications

webdunia
webdunia
webdunia
webdunia

ಟರ್ಕಿಯಲ್ಲಿ ಪತಿ ಜತೆ ಜಾಲಿ ಮೂಡ್‌ನಲ್ಲಿ ದೀಪಿಕಾ ದಾಸ್

ಟರ್ಕಿಯಲ್ಲಿ ಪತಿ ಜತೆ ಜಾಲಿ ಮೂಡ್‌ನಲ್ಲಿ ದೀಪಿಕಾ ದಾಸ್

Sampriya

ಬೆಂಗಳೂರು , ಬುಧವಾರ, 3 ಏಪ್ರಿಲ್ 2024 (20:03 IST)
photo Courtesy Instagram
ಬೆಂಗಳೂರು:  ಉದ್ಯಮಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಿಗ್‌ಬಾಸ್‌ ಖ್ಯಾತಿಯ ದೀಪಿಕಾ ದಾಸ್ ಅವರು ಪತಿ ಜತೆ ಟರ್ಕಿಯಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ.

ಟರ್ಕಿಯಲ್ಲಿ ಪತಿ ಜತೆ ವೆಕೇಷನ್ ಮೂಡ್‌ನಲ್ಲಿರುವ ದೀಪಿಕಾ ಅವರು ರೆಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿ, ಕಲರ್‌ಫುಲ್ ಡ್ರೆಸ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಈ ಪೋಟೋಗೆ ಯಾವಾಗಲೂ ಸೂರ್ಯನ ಕಿರಣಕ್ಕೆ ಮುಖ ಒಡ್ಡಿಕೊಳ್ಳಿ, ಆಗ ನೆರಳು ನಿಮ್ಮ ಹಿಂದೆಯೇ ಉಳಿಯುತ್ತದೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಟಿಯ ಆಕರ್ಷಕ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಮಾರ್ಚ್‌ 1ರಂದು ಉದ್ಯಮಿ ದೀಪಕ್ ಅವರನ್ನು ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದರು.

ದೀಪಕ್ ಮತ್ತು ನಾನು ನಾಲ್ಕು ವರ್ಷದ ಸ್ನೇಹಿತರು. 4 ವರ್ಷಗಳ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ವಿ. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಎಂದಿದ್ದರು ಎಂದು ತಮ್ಮ ಪ್ರೀತಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲೇ 'ಟಾಕ್ಸಿಕ್' ಚಿತ್ರೀಕರಣ ಶುರು ಮಾಡಬೇಕೆಂದ ಯಶ್‌ ಉದ್ದೇಶವೇನು?