Publish Date: Mon, 30 Nov 2020 (11:33 IST)
Updated Date: Mon, 30 Nov 2020 (11:35 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾದಿರುವ ಫ್ಯಾನ್ಸ್ ಗೆ ನಿರಾಸೆ ಕಾದಿದೆ.
ಚಿತ್ರಮಂದಿರ ತೆರೆದರೂ ಸದ್ಯಕ್ಕೆ ಶೇ. 50 ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ. ಫುಲ್ ಹಾಜರಾತಿಗೆ ಅವಕಾಶ ಸಿಗುವವರೆಗೂ ರಾಬರ್ಟ್ ಸಿನಿಮಾ ಬಿಡುಗಡೆಯಾಗಲ್ವಂತೆ. ಹೀಗಾಗಿ ರಾಬರ್ಟ್ ಬಿಡುಗಡೆ ಸದ್ಯಕ್ಕಂತೂ ಇಲ್ಲ. ಮುಂದಿನ ಎರಡು-ಮೂರು ತಿಂಗಳಿಗೆ ರಾಬರ್ಟ್ ಬಿಡುಗಡೆಯಾಗುವ ಮಾತೇ ಇಲ್ಲ ಬಿಡಿ.