Publish Date: Sun, 27 Oct 2019 (09:03 IST)
Updated Date: Sun, 27 Oct 2019 (09:04 IST)
ಬೆಂಗಳೂರು: ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಹೀಗಾಗಿ ಸ್ಟಾರ್ ನಟರೂ ತಮ್ಮ ಅಭಿಮಾನಿಗಳಿಗೆ ಶುಭ ಕೋರುವುದು, ಸೇಫ್ ದೀಪಾವಳಿ ಎನ್ನುವುದು ಸಾಮಾನ್ಯವಾಗಿದೆ.
ಡಿ ಬಾಸ್ ದರ್ಶನ್ ಕೂಡಾ ಇದರಲ್ಲಿ ಹಿಂದೆ ಬಿದ್ದಿಲ್ಲ. ಒಡೆಯ ಚಿತ್ರದ ಚಿತ್ರೀಕರಣ ಮುಗಿಸಿ ವಿದೇಶದಿಂದ ವಾಪಸಾಗಿರುವ ದರ್ಶನ್ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಷಯ ತಿಳಿಸಿದ್ದಾರೆ. ಜತೆಗೆ ಸಿಹಿ ಸುದ್ದಿಯೊಂದನ್ನೂ ಕೊಟ್ಟಿದ್ದಾರೆ.
ಒಡೆಯ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ ಎಂದು ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಮೂಲಗಳ ಪ್ರಕಾರ ಇದೇ ಡಿಸೆಂಬರ್ ನಲ್ಲಿ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ.