Select Your Language

Notifications

webdunia
webdunia
webdunia
webdunia

ಇಂದು ಆಯುಷ್ಮಾನ್ ಭವ ಟ್ರೈಲರ್ ಬಿಡುಗಡೆ

ಇಂದು ಆಯುಷ್ಮಾನ್ ಭವ ಟ್ರೈಲರ್ ಬಿಡುಗಡೆ
ಬೆಂಗಳೂರು , ಭಾನುವಾರ, 27 ಅಕ್ಟೋಬರ್ 2019 (08:52 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಇಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.


ನವಂಬರ್ 1 ರಂದು ಅಂದರೆ ರಾಜ್ಯೋತ್ಸವದಂದು ಆಯುಷ್ಮಾನ್ ಭವ ಸಿನಿಮಾ ಬಿಡುಗಡೆಯಾಗುತ್ತಿದೆ. ದ್ವಾರಕೀಶ್ ನಿರ್ಮಾಣ ಸಂಸ್ಥೆಯ ಚಿತ್ರ ಇದಾಗಿದ್ದು ಪಿ ವಾಸು ನಿರ್ದೇಶನದಲ್ಲಿ ಮೂಡಿಬಂದಿದೆ. ಈಗಾಗಲೇ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ.

ಒಂದು ರೀತಿಯಲ್ಲಿ ಹಾರರ್ ಹಿನ್ನಲೆಯ ಕತೆ ಇದಾಗಿದೆ. ಶಿವಣ್ಣ ಜತೆಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಅವರಲ್ಲದೆ ಹಿರಿಯ ನಟ ಅನಂತ್ ನಾಗ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಮಧ್ಯಾಹ್ನ 12.07 ಕ್ಕೆ ಟ್ರೈಲರ್ ಲಾಂಚ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ಇಂದು ಹೊರಬರುವವರು ಯಾರು?