Publish Date: Fri, 25 Oct 2019 (09:37 IST)
Updated Date: Fri, 25 Oct 2019 (09:39 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವಿಜರ್ ಲ್ಯಾಂಡ್ ನಲ್ಲಿದ್ದು, ತಮ್ಮ ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಸ್ವಿಜರ್ ಲ್ಯಾಂಡ್ ಗೆ ತೆರಳಿರುವ ಚಿತ್ರತಂಡ ಇದೀಗ ಚಿತ್ರೀಕರಣ ಮುಗಿಸಿದೆ ಎಂಬ ಸುದ್ದಿ ಬಂದಿದೆ. ಇದು ಡಿ ಬಾಸ್ ದರ್ಶನ್ ಅಭಿನಯದ 52 ನೇ ಸಿನಿಮಾವಾಗಿದೆ.
ಒಡೆಯ ಫಸ್ಟ್ ಲುಕ್ ಮೂಲಕ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾ ಈ ವರ್ಷ ಡಿಸೆಂಬರ್ ನಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ.