Select Your Language

Notifications

webdunia
webdunia
webdunia
webdunia

ಪೈಲ್ವಾನ್ ಸಿನಿಮಾ ವೀಕ್ಷಕರಿಗೆ ಸುವರ್ಣಾವಕಾಶ ಕೊಡುತ್ತಿದೆ ಚಿತ್ರತಂಡ!

webdunia
ಶುಕ್ರವಾರ, 25 ಅಕ್ಟೋಬರ್ 2019 (09:24 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಈಗಾಗಲೇ ಭರ್ಜರಿ ಹಿಟ್ ಆಗಿ ಇನ್ನೂ ಚಿತ್ರಮಂದಿರದಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದೀಗ ವೀಕ್ಷಕರಿಗೆ ಪೈಲ್ವಾನ್ ಚಿತ್ರತಂಡ ಸುವರ್ಣಾವಕಾಶವೊಂದನ್ನು ನೀಡಿದೆ.


ಪೈರಸಿ ಹಾವಳಿಯ ಹೊರತಾಗಿಯೂ ಭರ್ಜರಿ ಗಳಿಕೆ ಮಾಡಿರುವುದರಿಂದ ಸಂತೋಷಗೊಂಡಿರುವ ನಿರ್ಮಾಪಕ, ನಿರ್ದೇಶಕ ಕೃಷ್ಣ ಈ ವಾರ ಪೂರ್ತಿ ಸಿನಿಮಾ ಟಿಕೆಟ್ ದರವನ್ನು ಶೇ.50 ರಷ್ಟು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅಂದರೆ ಪೈಲ್ವಾನ್ ಸಿನಿಮಾ ಟಿಕೆಟ್ ಶೇ. 50 ರಷ್ಟು ಅಗ್ಗವಾಗಲಿದೆ.

ಇದು ಈ ವಾರ ಪೂರ್ತಿ ಜಾರಿಯಲ್ಲಿರಲಿದೆ. ಆದರೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಈ ಅವಕಾಶ ಲಭ‍್ಯವಿರಲ್ಲ. ನಿರ್ದೇಶಕರ ಈ ನಿರ್ಧಾರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ದಬಾಂಗ್ 3 ಟ್ರೈಲರ್: ಸಲ್ಮಾನ್ ಖಾನ್ ಕನ್ನಡ ಮಾತಿಗೆ ಪ್ರೇಕ್ಷಕರು ಫಿದಾ