Select Your Language

Notifications

webdunia
webdunia
webdunia
webdunia

ನವಂಬರ್ ನಲ್ಲಿ ಹಸೆಮಣೆ ಏರಲಿರುವ ಸ್ಯಾಂಡಲ್ ವುಡ್ ನಟ ರಿಷಿ

ನವಂಬರ್ ನಲ್ಲಿ ಹಸೆಮಣೆ ಏರಲಿರುವ ಸ್ಯಾಂಡಲ್ ವುಡ್ ನಟ ರಿಷಿ
ಬೆಂಗಳೂರು , ಗುರುವಾರ, 24 ಅಕ್ಟೋಬರ್ 2019 (10:07 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಆಪರೇಷನ್ ಅಲಮೇಲಮ್ಮ, ಕವಲು ದಾರಿ ಮುಂತಾದ ಸಿನಿಮಾಗಳ ಮೂಲಕ ಹೊಸ ಸಂಚಲನ ಮೂಡಿಸಿದ್ದ ಭರವಸೆಯ ನಟ ರಿಷಿ ಹಸೆಮಣೆ ಏರಲು ಸಿದ್ಧರಾಗಿದ್ದಾರೆ.


ಕೆಲವು ದಿನಗಳ ಮೊದಲು ರಿಷಿ ತಮ್ಮ ಗೆಳತಿ ಸ್ವಾತಿ ಜತೆ ಹೈದರಾಬಾದ್ ನಲ್ಲಿ ವಿವಾಹ ನಿಶ್ಚತಾರ್ಥ ಮಾಡಿಕೊಂಡಿದ್ದರು. ಇದೀಗ ನವಂಬರ್ 8, 9 ಮತ್ತು 10 ರಂದು ಇವರ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.

ಚೆನ್ನೈಯಲ್ಲಿ ವಿವಾಹ ಕಾರ್ಯಕ್ರಮಗಳು ನಡೆಯಲಿದ್ದು, ಬಳಿಕ ಬೆಂಗಳೂರಿನಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ. ಮದುವೆಗಾಗಿ ಕೆಲವು ದಿನಗಳ ಕಾಲ ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರಂತೆ ರಿಷಿ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದ ದಾಡಿ, ತೂಕ ಇಳಿಸಿದ್ದರ ಕಾರಣ ಏನೆಂದು ಬಹಿರಂಗಪಡಿಸಿದ ಜೆಕೆ