Select Your Language

Notifications

webdunia
webdunia
webdunia
webdunia

ಉದ್ದ ದಾಡಿ, ತೂಕ ಇಳಿಸಿದ್ದರ ಕಾರಣ ಏನೆಂದು ಬಹಿರಂಗಪಡಿಸಿದ ಜೆಕೆ

ಉದ್ದ ದಾಡಿ, ತೂಕ ಇಳಿಸಿದ್ದರ ಕಾರಣ ಏನೆಂದು ಬಹಿರಂಗಪಡಿಸಿದ ಜೆಕೆ
ಬೆಂಗಳೂರು , ಗುರುವಾರ, 24 ಅಕ್ಟೋಬರ್ 2019 (09:22 IST)
ಬೆಂಗಳೂರು: ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಹೊಸ ಸಿನಿಮಾ ‘ನೀರೇ’ ಯಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಾಗಿರುತ್ತದೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಿನ್ನೆ ನೆರವೇರಿದೆ.


ವಿಶೇಷವೆಂದರೆ ಕಳೆದ ಕೆಲವು ದಿನಗಳಿಂದಲೂ ಜೆಕೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಪ್ರಕಟಿಸುತ್ತಲೇ ಇದ್ದರು. ಹಾಗೆಯೇ ಉದ್ದ ದಾಡಿ ಬಿಟ್ಟುಕೊಂಡಿದ್ದರು. ಇದೆಲ್ಲದಕ್ಕೂ ಕಾರಣ ಈ ಸಿನಿಮಾ ಎಂದು ಜೆಕೆ ಹೇಳಿದ್ದಾರೆ. ನೀರೆ ಸಿನಿಮಾಗಾಗಿ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರಂತೆ ಜೆಕೆ.

ಇನ್ನು ಈ ಸಿನಿಮಾಗೆ ಶ್ರೀ ಚರಣ್ ನಿರ್ದೇಶಕರು. ಉಳಿದಂತೆ ಸಮೀಕ್ಷಾ ನಾಯಕಿ. ಅಲ್ಲದೆ, ದಿಲೀಪ್ ರಾಜ್ ಕೂಡಾ ಸಿನಿಮಾದಲ್ಲಿರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣ-ಧ್ರುವ ಸರ್ಜಾ ಪೊಗರು ಸಿನಿಮಾದಲ್ಲಿ ಏನಿದೆ? ಇಂದು ಗೊತ್ತಾಗುತ್ತೆ!