Select Your Language

Notifications

webdunia
webdunia
webdunia
webdunia

ಉಪೇಂದ್ರ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದ್ದರೆ ಇಲ್ಲಿದೆ ಅವಕಾಶ

ಉಪೇಂದ್ರ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದ್ದರೆ ಇಲ್ಲಿದೆ ಅವಕಾಶ
ಬೆಂಗಳೂರು , ಭಾನುವಾರ, 27 ಅಕ್ಟೋಬರ್ 2019 (08:55 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಆರ್ ಚಂದ್ರು ನಿರ್ದೇಶನದಲ್ಲಿ ಕಬ್ಜ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.


ಐ ಲವ್ ಯೂ ಯಶಸ್ಸಿನ ನಂತರ ಮತ್ತೆ ಚಂದ್ರ-ಉಪೇಂದ್ರ ಜತೆಯಾಗಿ ಮಾಡುತ್ತಿರುವ ಸಿನಿಮಾವಿದು. ಇದು ಕನ್ನಡ ಮಾತ್ರವಲ್ಲದೆ, 7 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಇದೀಗ ಆ ಸಿನಿಮಾದಲ್ಲಿ ಚಿತ್ರತಂಡ ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿದೆ. ರಗಡ್ ಲುಕ್ ಇರುವ 20 ರಿಂದ 40 ವರ್ಷದೊಳಗಿನ ಪುರುಷರು, ನಟನೆಯಲ್ಲಿ ಆಸಕ್ತಿ ಇರುವವರು ಅವಕಾಶಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಚಿತ್ರತಂಡ ಪ್ರಕಟಿಸಿದೆ. ಆಸಕ್ತರು [email protected] ಎಂಬ ಈಮೇಲ್ ಐಡಿಗೆ ಸ್ವ ವಿವರ ಮತ್ತು ಇತ್ತೀಚೆಗಿನ ಭಾವಚಿತ್ರ ಸಮೇತ ಕಳುಹಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಆಯುಷ್ಮಾನ್ ಭವ ಟ್ರೈಲರ್ ಬಿಡುಗಡೆ