Select Your Language

Notifications

webdunia
webdunia
webdunia
webdunia

ಪತಿ ದರ್ಶನ್ ಮೇಲಿನ ಬೇಸರದಿಂದ ಇನ್ ಸ್ಟಾಗ್ರಾಂನಿಂದಲೇ ಹೊರಬಂದ ವಿಜಯಲಕ್ಷ್ಮಿ

Darshan

Krishnaveni K

ಬೆಂಗಳೂರು , ಗುರುವಾರ, 13 ಜೂನ್ 2024 (14:59 IST)
ಬೆಂಗಳೂರು: ರೇಣುಕಾಸ್ವಾಮಿ ಎಂಬಾತನ ಮೇಲೆ ಹಲ್ಲೆ ನಡೆಸಿ, ಹತ್ಯೆ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಪತಿ ದರ್ಶನ್ ಮೇಲಿನ ಬೇಸರದಿಂದ ಪತ್ನಿ ವಿಜಯಲಕ್ಷ್ಮಿ ಇಂದು ಇನ್ ಸ್ಟಾಗ್ರಾಂ ಖಾತೆಯನ್ನೇ ಡಿ ಆಕ್ಟಿವೇಟ್ ಮಾಡಿಕೊಂಡಿದ್ದಾರೆ.

ದರ್ಶನ್ ಬಂಧನವಾಗುತ್ತಿದ್ದಂತೇ ವಿಜಯಲಕ್ಷ್ಮಿ ತಮ್ಮ ಇನ್ ಸ್ಟಾಗ್ರಾಂ ಡಿಪಿ ಕಿತ್ತು ಹಾಕಿದ್ದಲ್ಲದೆ, ದರ್ಶನ್ ರನ್ನು ಅನ್ ಫಾಲೋ ಮಾಡಿಕೊಂಡಿದ್ದರು. ಇದು ನಿನ್ನೆ ಭಾರೀ ಸುದ್ದಿಯಾಗಿತ್ತು. ಈ ಮೂಲಕ ಪತಿ ಮೇಲಿನ ಆಕ್ರೋಶ ಹೊರಹಾಕಿಕೊಂಡಿದ್ದಾರೆ. ಆದರೆ ಇಂದು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ವಿಜಿ ದರ್ಶನ್ ಎಂಬ ಹೆಸರಿನಲ್ಲಿ ವಿಜಯಲಕ್ಷ್ಮಿ ಖಾತೆ ಹೊಂದಿದ್ದರು. ಅವರಿಗೆ ಸಾಕಷ್ಟು ಫಾಲೋವರ್ ಗಳೂ ಇದ್ದರು. ತಮ್ಮ, ಮಗನ ಫೋಟೋ ಪ್ರಕಟಿಸುವ ಮೂಲಕ ಇನ್ ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿದ್ದರು. ಆದರೆ ದರ್ಶನ್ ಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಅನೇಕರು ಇನ್ ಸ್ಟಾದಲ್ಲಿ ಅವರಿಗೆ ಕಾಮೆಂಟ್ ಮಾಡುತ್ತಲೇ ಇದ್ದರು.

ನೀವು ದರ್ಶನ್ ಜೊತೆ ಸಂಬಂಧವನ್ನೇ ಕಡಿದುಕೊಳ್ಳಿ. ಅವರಿಂದ ದೂರವಾಗಿ. ಸಹಿಸಿಕೊಳ್ಳುವುದಕ್ಕೂ ಒಂದು ಮಿತಿಯಿದೆ ಎಂದೆಲ್ಲಾ ನೆಟ್ಟಿಗರು ಅವರ ಹಳೆಯ ಪೋಸ್ಟ್ ಗಳಲ್ಲೆಲ್ಲಾ ಕಾಮೆಂಟ್ ಮಾಡುತ್ತಿದ್ದರು. ಆದರೆ ಇಂದು ಬಹುಶಃ ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ಇನ್ ಸ್ಟಾಗ್ರಾಂನಿಂದಲೇ ಹೊರಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ಹಮಾರೆ ಬಾರಹ್' ಸಿನಿಮಾಕ್ಕೆ ಮತ್ತೆ ಹಿನ್ನಡೆ: ನಾಳೆ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಸುಪ್ರೀಂಕೋರ್ಟ್ ತಡೆ