Select Your Language

Notifications

webdunia
webdunia
webdunia
webdunia

ದರ್ಶನ್ ಕೇಸ್ ಮುಚ್ಚಲು ರಾಜ್ಯದ ಪ್ರಭಾವಿ ಸಚಿವರಿಂದಲೇ ಕರೆ ಆರೋಪ

Darshan

Krishnaveni K

ಬೆಂಗಳೂರು , ಗುರುವಾರ, 13 ಜೂನ್ 2024 (13:33 IST)
ಬೆಂಗಳೂರು: ರೇಣುಕಾಸ್ವಾಮಿ ಕೇಸ್ ಮುಚ್ಚಿಹಾಕಿ ದರ್ಶನ್ ರನ್ನು ಕೇಸ್ ನಿಂದ ಬಚಾವ್ ಮಾಡಲು ರಾಜ್ಯದ ಪ್ರಭಾವಿ ಸಚಿವರೇ ಒಬ್ಬರು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹತ್ಯೆ ಪ್ರಕರಣದಲ್ಲಿ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ. ಆದರೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ನೂರಾರು ಬಾರಿ ಕರೆ ಮಾಡಿರುವ ಪ್ರಭಾವಿ ಸಚಿವರೊಬ್ಬರು ಕೇಸ್ ನಿಂದ ದರ್ಶನ್ ರನ್ನು ತೆಗೆದುಹಾಕುವಂತೆ ಒತ್ತಡ ಹೇರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದರ್ಶನ್ ಗೆ ಯಾವೆಲ್ಲಾ ರಾಜಕಾರಣಿಗಳ ಜೊತೆ ಆತ್ಮೀಯ ಸಂಬಂಧವಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇವರೇ ಯಾರೋ ಕರೆ ಮಾಡಿರುವುದು ಖಚಿತವಾಗಿದೆ.

ಇನ್ನು, ತನಿಖಾಧಿಕಾರಿಗಳಿಗೆ ಮಾತ್ರವಲ್ಲ, ಮರಣೋತ್ತರ ಪರೀಕ್ಷೆ ವರದಿ ತಯಾರಿಸುವ ವೈದ್ಯರಿಗೂ 1 ಕೋಟಿ ರೂ. ಆಫರ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮರಣೋತ್ತರ ವರದಿಯಲ್ಲಿ ಹೃದಯಾಘಾತದಿಂದ ಸಾವು ಎಂದು ವರದಿ ನೀಡಿ ದರ್ಶನ್ ರನ್ನು ಬಚಾವ್ ಮಾಡಲು ರಾಜಕಾರಣಿಯಿಂದ ಒತ್ತಡ ಬಂದಿದೆಯಂತೆ.

ಆದರೆ ಸದ್ಯದ ಮಟ್ಟಿಗೆ ಯಾವ ಅಧಿಕಾರಿಗಳೂ ಈ ಎಲ್ಲಾ ಒತ್ತಡಗಳಿಗೆ ಮಣಿಯದೇ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ದರ್ಶನ್ ಸಮಾಜದಲ್ಲಿ ಸೆಲೆಬ್ರಿಟಿ ಸ್ಥಾನ ಪಡೆದುಕೊಂಡಿದ್ದು, ಅವರು ಈ ಕೇಸ್ ನಲ್ಲಿ ಸಿಲುಕಿಕೊಂಡರೆ ಅವರ ಜೀವನವೇ ಹಾಳಾಗುತ್ತದೆ ಎಂಬ ಕಾರಣಕ್ಕೆ ಪ್ರಭಾವಿಗಳನ್ನು ಬಳಸಿ ಈ ಕೇಸ್ ನಿಂದ ಬಚಾವ್ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಲನ್ ಗಳು ಸತ್ತಾಗ ಸಂಭ್ರಮಿಸೋದು ಅಭ್ಯಾಸವಾಗಿ ಈ ಸಾವಿನ ತೀವ್ರತೆ ಗೊತ್ತಾಗುತ್ತಿಲ್ಲವೇ: ನಟಿ ರಂಜಿನಿ ರಾಘವನ್