Select Your Language

Notifications

webdunia
webdunia
webdunia
webdunia

ದರ್ಶನ್ ವಾಸವಿರುವ ಆರ್ ಆರ್ ನಗರದ ವಾಸ್ತುವೇ ಸರಿಯಿಲ್ಲ ಎಂದಿದ್ದ ಆರ್ಯವರ್ಧನ್ ಗುರೂಜಿ

Aryavardhan guruji

Krishnaveni K

ಬೆಂಗಳೂರು , ಗುರುವಾರ, 13 ಜೂನ್ 2024 (11:30 IST)
ಬೆಂಗಳೂರು: ಸದಾ ವಿವಾದಗಳಿಂದಲೇ ಸುದ್ದಿಯಾಗುವ ನಟ ದರ್ಶನ್ ಇಂದು ಹತ್ಯೆ ಕೇಸ್ ನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇದರ ನಡುವೆ ದರ್ಶನ್ ವಾಸವಿರುವ ಆರ್ ಆರ್ ನಗರದ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ ನೀಡಿರುವ ಹಳೆಯ ಸಂದರ್ಶನವೊಂದರ ವಿಡಿಯೋ ಈಗ ವೈರಲ್ ಆಗಿದೆ.

ದರ್ಶನ್ ಮನೆಯಿರುವುದು ಆರ್ ಆರ್ ನಗರದಲ್ಲಿ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಕಾರಣವಾಗಿರುವುದೂ ಇದೇ ಆರ್ ಆರ್ ನಗರದ ಆಸುಪಾಸಿನಲ್ಲೇ. ಈಗ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಈ ಆರ್ ಆರ್ ನಗರದ ವಾಸ್ತು ಬಗ್ಗೆ ಆರ್ಯವರ್ಧನ್ ಗುರೂಜಿ ನೀಡಿರುವ ಹೇಳಿಕೆಯೊಂದನ್ನು ವೈರಲ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಆರ್ಯವರ್ಧನ್ ಗುರೂಜಿ ಆರ್ ಆರ್ ನಗರದ ವಾಸ್ತುವೇ ಸರಿಯಿಲ್ಲ. ನೀವು ಅಲ್ಲಿ ನೆಲೆಸಿರುವ ಯಾರನ್ನೇ ಆದರೂ ನೋಡಿ ಯಾವತ್ತೂವ ವಿವಾದ, ಸಮಸ್ಯೆಗಳಲ್ಲೇ ಇರ್ತಾರೆ. ನನಗೆ ಯಾರದ್ದೇ ಹೆಸರಾದರೂ ಹೇಳಿ. ನಾನು ಹೇಳ್ತೀನಿ ಏನು ಸಮಸ್ಯೆ ಅಂತ ಎಂದಿದ್ದರು.

ಅದಕ್ಕೆ ಸಂದರ್ಶಕರು ಯಾಕೆ ಹೀಗೆ ಎಂದು ಕೇಳಿದ್ದರು. ಅದಕ್ಕೆ ಆರ್ಯವರ್ಧನ್ ಗುರೂಜಿ ‘ಆರ್ ಆರ್ ನಗರದ ವಾಸ್ತುವೇ ಸರಿಯಿಲ್ಲ. ಅಲ್ಲಿ ಎಂಟ್ರನ್ಸ್ ನಲ್ಲಿ ಈಶಾನ್ಯ ಮೂಲೆಯಲ್ಲಿ ಮೋರಿ ಬರುತ್ತದೆ. ಇದರಿಂದಲೇ ವಾಸ್ತು ದೋಷಗಳಿವೆ’ ಎಂದಿದ್ದರು. ಇದೀಗ ಆ ವಿಡಿಯೋವನ್ನು ವೈರಲ್ ಮಾಡಿರುವ ಅಭಿಮಾನಿಗಳು ಯಾವ ಭಾಯಲ್ಲಿ ಇಂತಹದ್ದೊಂದು ಹೇಳಿದಿರೋ, ಅದು ನಿಜವಾಗುತ್ತಲೇ ಇದೆ ನೋಡಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೇ ಒಡಿಶಾದ ಪುರಿ ಜಗನ್ನಾಥ ದೇವಾಲಯದ ನಾಲ್ಕು ಬಾಗಿಲು ಭಕ್ತರಿಗಾಗಿ ಓಪನ್