Select Your Language

Notifications

webdunia
webdunia
webdunia
webdunia

ಕೆಟ್ಟ ಕಮೆಂಟ್ ಗೆ ಮನನೊಂದು ಇನ್‌ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ ದರ್ಶನ್ ಪತ್ನಿ

ಕೆಟ್ಟ ಕಮೆಂಟ್ ಗೆ ಮನನೊಂದು ಇನ್‌ಸ್ಟಾಗ್ರಾಂ  ಖಾತೆಯನ್ನೇ ಡಿಲೀಟ್ ಮಾಡಿದ ದರ್ಶನ್ ಪತ್ನಿ

sampriya

ಬೆಂಗಳೂರು , ಗುರುವಾರ, 13 ಜೂನ್ 2024 (20:08 IST)
Photo By X
ಬೆಂಗಳೂರು: ರೇಣುಕಾಸ್ವಾಮಿ‌ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು‌ ಬಂಧಿಸುತ್ತಿದ್ದ ಹಾಗೇ ಅವರ ಪತ್ನಿ ವಿಜಯಲಕ್ಷ್ಮೀ ಮೌನಕ್ಕೆ ಜಾರಿದ್ದಾರೆ. ಇನ್ನೂ ದರ್ಶನ್ ಅವರ ಬಂಧನವಾಗುತ್ತಿದ್ದ ಹಾಗೇ ದರ್ಶನ್  ಅವರನ್ನು ಅನ್ ಫಾಲೋ ಮಾಡಿ, ತನ್ನ‌ ಡಿಪಿಯನ್ನು ಡಿಲೀಟ್ ಮಾಡಿದ್ದರು. ನೋವಿನಲ್ಲಿರುವ ವಿಜಯಲಕ್ಷ್ಮೀ ಅವರು‌ ಇದೀಗ ತಮ್ಮ ಇನ್‌ಸ್ಟಾಗ್ರಾಂ  ಖಾತೆಯನ್ನೇ ಡಿಲೀಟ್‌ ಮಾಡಿದ್ದಾರೆ.

ಕಿಡ್ನಾಪ್‌ ಹಾಗೂ ಮರ್ಡರ್‌ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ದರ್ಶನ್‌  ಅವರನ್ನು ಅನ್‌ಫಾಲೋ ಮಾಡಿ, ಡಿಪಿ ರಿಮೂವ್‌ ಮಾಡಿದ್ದರು. ಆದರೆ ಇಂದು ವಿಜಯಲಕ್ಷ್ಮಿ ಇನ್‌ ಸ್ಟಾಗ್ರಾಂ ಖಾತೆಯಿಂದಲೇ ಹೊರ ನಡೆದಿದ್ದಾರೆ.

ಇನ್ನೂ ಪ್ರಕರಣ‌ ಸಂಬಂಧ ‌ವಿಜಯಲಕ್ಷ್ಮೀ ಅವರಿಗೆ ನೆಟ್ಟಿಗರು ಕೆಟ್ಟ ಕಮೆಂಟ್ ಮಾಡುತ್ತಿದ್ದು, ಇದರಿಂದ ಮನನೊಂದು ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

ಇನ್ನೂ ಪ್ರಕರಣ ಸಂಬಂಧ ಇದುವರೆಗೂ ದರ್ಶನ್ ಅವರ ಕುಟುಂಬ ಪ್ರತಿಕ್ರಿಯಿಸಿಲ್ಲ.

ಪ್ರಕರಣದ ಹಿನ್ನೆಲೆ: ಪವಿತ್ರಾ ಗೌಡಗೆ ಚಿತ್ರದುರ್ಗದ  ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕೋಪದಲ್ಲಿ‌ ಡಿ ಬಾಸ್ ಗ್ಯಾಂಗ್ ಆತನನ್ನು‌ ಕೂಡಿ ಹಾಕಿ‌ ಚಿತ್ರಹಿಂಸೆ ನೀಡಿ,‌ ಕೊಲೆ‌ ಮಾಡಿದ್ದರು. ಬಳಿಕ ಶವವನ್ನು ಸುಮನಹಳ್ಳಿ ಬಳಿ ಮೋರಿಗೆ ಎಸೆದಿದ್ದರು. ಇದಾದ ಬಳಿಕ ಇಬ್ಬರು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ಇದರಲ್ಲಿ ನಟ ದರ್ಶನ್‌ ಹಾಗೂ ಅವರ ಗೆಳತಿ ಪವಿತ್ರಾ ಗೌಡ ಹೆಸರು ಹೊರಬಿದ್ದಿದೆ.  

ಸದ್ಯ ಇದೀಗ ಕೊಲೆ ಪ್ರಕರಣ ಸಂಬಂದ ದರ್ಶನ್ ಹಾಗೂ ಪವಿತ್ರಾ ಸೇರಿದಂತೆ 14 ಮಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಬ್ಯುಸಿಯಲ್ಲೂ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್, ರಾಜ್ ಬಿ ಶೆಟ್ಟಿ