Select Your Language

Notifications

webdunia
webdunia
webdunia
webdunia

ಮಳೆ ಎಂಜಾಯ್‌ ಮಾಡುತ್ತಾ, ಕ್ಯೂಟ್‌ ಫೋಟೋ ಹಂಚಿಕೊಂಡ ತಮನ್ನಾ

Tamanna Bhatiya

sampriya

ಮುಂಬೈ , ಬುಧವಾರ, 5 ಜೂನ್ 2024 (17:40 IST)
Photo By Instagram
ಮುಂಬೈ:  ನಟಿ ತಮನ್ನಾ ಭಾಟಿಯಾ ಅವರು ಮುಂಬೈನಲ್ಲಿ ಮಳೆಯ ಸಿಂಚನವನ್ನು ಆನಂದಿಸುತ್ತಿರುವ ಕ್ಷಣಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ತಮ್ಮ ದಿನದ ಸಂತೋಷದ ಕ್ಷಣಗಳನ್ನು ಶೇರ್‌ ಮಾಡಿದ್ದಾರೆ.

ನಟಿ ತಮನ್ನಾ ಅವರು ಇಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ಗೆ ಚಿತ್ರಗಳ ಸರಣಿ ಮತ್ತು ವೀಡಿಯೊವನ್ನು ಹಂಚಿಕೊಂಡರು. ಮೊದಲ ಚಿತ್ರದಲ್ಲಿ ಕಾರಿನ ಗಾಜಿನ ಮೇಲೆ ಮಳೆ ಹನಿಯ ಫೋಟೋ ಹಾಗೂ ಅದನ್ನು ತಾನು ಎಂಜಾಯ್‌ ಮಾಡುತ್ತಿರುವ ಸೆಲ್ಫಿ ಫೋಟೋವನ್ನು ಶೇರ್‌ ಮಾಡಿದ್ದಾರೆ.

ವಿಶಾಲವಾದ ಸ್ಮೈಲ್‌ನೊಂದಿಗೆ ತನ್ನ ಕಾರಿನಲ್ಲಿ ಕುಳಿತಿರುವ ತಮನ್ನಾ ಅವರು, "ನೋ ಪಾಯಿಂಟ್ಸ್‌ ಫಾರ್‌ ಗೆಸ್ಸಿಂಗ್‌ ವೈʼ ಎಂದು ಮಳೆ ಹಾಗೂ ಡ್ಯಾನ್ಸ್‌ ಮಾಡುತ್ತಿರುವ ಎಮೋಜಿಯೊಂದಿಗೆ ಸೆಲ್ಫಿ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತಮನ್ನಾ ಅವರು ಕೊನೆಯ ಬಾರಿಗೆ ಹಾರರ್ ಕಾಮಿಡಿ 'ಅರಣ್ಮನೈ 4' ನಲ್ಲಿ ಕಾಣಿಸಿಕೊಂಡರು. ಸುಂದರ್ ಸಿ ಬರೆದಿರುವ ಈ ಚಿತ್ರವನ್ನು ಅವ್ನಿ ಸಿನೆಮ್ಯಾಕ್ಸ್ ಬ್ಯಾನರ್ ಅಡಿಯಲ್ಲಿ ಖುಷ್ಬು ಸುಂದರ್ ನಿರ್ಮಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಮುಂದೆ ಖಾತೆಗಾಗಿ ಕುಮಾರಸ್ವಾಮಿ ಡಿಮಾಂಡಪ್ಪೋ, ಡಿಮಾಂಡು