Publish Date: Sat, 06 Feb 2021 (09:27 IST)
Updated Date: Sat, 06 Feb 2021 (09:29 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ದೇವರಂತೆ ಪೂಜೆ ಮಾಡುವ ಅಭಿಮಾನಿಗಳಿದ್ದಾರೆ. ಅಂತಹದ್ದರಲ್ಲಿ ಒಂದೂವರೆ ವರ್ಷದ ಬಳಿಕ ದರ್ಶನ್ ರನ್ನು ತೆರೆ ಮೇಲೆ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದರೆ ಅಚ್ಚರಿಯೇ ಇಲ್ಲ.
ನಿನ್ನೆ ಬಿಡುಗಡೆಯಾದ ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡಿದ್ದಾರೆ. ದರ್ಶನ್ ರನ್ನು ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಸ್ಕ್ರೀನ್ ಮೇಲೆ ನೋಡಿದ ಚನ್ನರಾಯಪಟ್ಟಣದ ಅಭಿಮಾನಿಗಳು ಭಾರೀ ಶಿಳ್ಳೆ, ಚಪ್ಪಾಳೆ ಹೊಡೆದು ಸ್ವಾಗತಿಸಿದ್ದಲ್ಲದೆ, ಕರ್ಪೂರದ ಆರತಿ ಎತ್ತಿ ಪೂಜೆ ಮಾಡಿದ್ದಾರೆ. ಒಬ್ಬ ನಟನಿಗೆ ಇದಕ್ಕಿಂತ ದೊಡ್ಡ ಅಭಿಮಾನ ಇನ್ನೇನು ಬೇಕು?