Publish Date: Sat, 06 Feb 2021 (09:03 IST)
Updated Date: Sat, 06 Feb 2021 (09:05 IST)
ಬೆಂಗಳೂರು: ಡ್ರಗ್ ಕೇಸ್ ನಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ನಟಿ ರಾಗಿಣಿ ಈಗ ಮತ್ತೆ ತಮ್ಮ ಹಳೆಯ ದಿನಚರಿಗೆ ಮರಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿರುವ ರಾಗಿಣಿ, ಮತ್ತೆ ತಮ್ಮ ಮೆಚ್ಚಿನ ಅಡುಗೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೂ ಮೊದಲೂ ರಾಗಿಣಿ ಹೊಸ ರುಚಿಯ ಅಡುಗೆ ವಿಡಿಯೋಗಳ ಪ್ರಯೋಗಗಳನ್ನು ನೆಟ್ಟಿಗರಿಗೆ ತೋರಿಸಿಕೊಡುತ್ತಿದ್ದರು. ಇದೀಗ ಮತ್ತೆ ತಮ್ಮ ತಂದೆಗೆ ಹೊಸ ರುಚಿಯ ಅಡುಗೆ ಮಾಡಿ ಖಷಿ ಕೊಟ್ಟ ಗಳಿಗೆಗಳನ್ನು ಪ್ರಕಟಿಸಿದ್ದು, ಮತ್ತೆ ತಾವು ಸಹಜ ಜೀವನಕ್ಕೆ ಮರಳುತ್ತಿರುವುದರ ಸೂಚನೆ ಕೊಟ್ಟಿದ್ದಾರೆ.