Select Your Language

Notifications

webdunia
webdunia
webdunia
webdunia

ರಾಮಾರ್ಜುನ ಸಿನಿಮಾ ಅನ್ಯಾಯಕ್ಕೆ ಧ್ವನಿಗೂಡಿಸಿದ ಸ್ಯಾಂಡಲ್ ವುಡ್

ರಾಮಾರ್ಜುನ ಸಿನಿಮಾ ಅನ್ಯಾಯಕ್ಕೆ ಧ್ವನಿಗೂಡಿಸಿದ ಸ್ಯಾಂಡಲ್ ವುಡ್
ಬೆಂಗಳೂರು , ಶನಿವಾರ, 6 ಫೆಬ್ರವರಿ 2021 (08:55 IST)
ಬೆಂಗಳೂರು: ರಾಮಾರ್ಜುನ ಸಿನಿಮಾ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಥಿಯೇಟರ್ ನಿಂದ ಎತ್ತಂಗಡಿ ಮಾಡಿದ್ದು ನಿರ್ದೇಶಕ, ನಟ ಅನೀಶ್ ಬೇಸರಕ್ಕೆ ಕಾರಣವಾಗಿದೆ. ಹೊಸಬರ ಚಿತ್ರಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಈಗ ನಟ ರಕ್ಷಿತ್ ಶೆಟ್ಟಿ, ಡಾರ್ಲಿಂಗ್ ಕೃಷ್ಣ ಮುಂತಾದವರು ಬೆನ್ನುಲುಬಾಗಿ ನಿಂತಿದ್ದಾರೆ.


ಹೊಸಬರು ಚಿತ್ರರಂಗಕ್ಕೆ ಹೊಸ ನಿರೀಕ್ಷೆಯೊಂದಿಗೆ ಹೆಜ್ಜೆ ಹಾಕುತ್ತಾರೆ. ಆದರೆ ಅವರ ಶ್ರಮವನ್ನು ಆರಂಭದಲ್ಲೇ ಚಿವುಟಿ ಹಾಕಿದರೆ ಚಿತ್ರರಂಗದಲ್ಲಿ ಬೆಳೆಯುವುದು ಕಷ್ಟವಾಗುತ್ತದೆ. ಇಂತಹವರಿಗೆ ನಾವು ಶಕ್ತಿಯಾಗಬೇಕು, ಸ್ಪೂರ್ತಿಯಾಗಬೇಕು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಧ್ರುವ ಸರ್ಜಾ ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಈ ಸಿನಿಮಾ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ. ಈ ಮೊದಲು ಡಾರ್ಲಿಂಗ್ ಕೃಷ್ಣ ಕೂಡಾ ಇದೇ ಸಮಸ್ಯೆ ಎದುರಿಸಿದ್ದರು. ಲವ್ ಮಾಕ್ಟೇಲ್ ಸಿನಿಮಾವನ್ನೂ ಇದೇ ರೀತಿ ಎತ್ತಂಗಡಿ ಮಾಡಲಾಗಿತ್ತು. ಆದರೆ ಕಿಚ್ಚ ಸುದೀಪ್ ಸಹಾಯ ಆಗ ಕೃಷ್ಣಗೆ ಸಿಕ್ಕಿತ್ತು. ಮತ್ತೊಂದು ವಾರದಲ್ಲಿ ಲವ್ ಮಾಕ್ಟೇಲ್ ಭರ್ಜರಿ ರೆಸ್ಪಾನ್ಸ್ ಪಡೆದಿತ್ತು. ಹೀಗಾಗಿ ತಮ್ಮದೇ ಪರಿಸ್ಥಿತಿ ಎದುರಿಸುತ್ತಿರುವ ಅನೀಶ್ ಗೆ ಕೃಷ್ಣ ಬೆಂಬಲವಾಗಿ ನಿಂತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ಆಚಾರ್ಯ' ಚಿತ್ರದ ಆಡಿಯೋ ಹಕ್ಕು ಪಡೆದ ಆದಿತ್ಯ ಮ್ಯೂಸಿಕ್