Select Your Language

Notifications

webdunia
webdunia
webdunia
Thursday, 10 April 2025
webdunia

ಬೆಂಗಳೂರಲ್ಲಿ ಭೇಟಿಯಾಗೋಣ, ಬಳ್ಳಾರಿ ಜೈಲಲ್ಲಿರುವ ದರ್ಶನ್ ಗೆ ಎಂಥಾ ಕಾನ್ಫಿಡೆನ್ಸ್ ನೋಡಿ

Darshan

Krishnaveni K

ಬೆಂಗಳೂರು , ಸೋಮವಾರ, 28 ಅಕ್ಟೋಬರ್ 2024 (11:35 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಕಳೆಯುತ್ತಿದ್ದಾರೆ. ಆದರೆ ಅವರಲ್ಲಿ ಎಂಥಾ ಕಾನ್ಫಿಡೆನ್ಸ್ ಇದೆ ಎನ್ನುವುದು ಈ ಮಾತಿನಿಂದಲೇ ಸ್ಪಷ್ಟವಾಗುತ್ತದೆ.

ನಟ ದರ್ಶನ್ ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಜಾಮೀನು ಅರ್ಜಿಯ ತೀರ್ಪು ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಇಂದು ಅವರ ಬೆನ್ನು ನೋವಿನ ಸಮಸ್ಯೆಯ ನೆಪವೊಡ್ಡಿ ವಕೀಲ ಸಿವಿ ನಾಗೇಶ್ ಜಾಮೀನಿಗಾಗಿ ವಾದ ಮಂಡಿಸಲಿದ್ದಾರೆ.

ಒಂದೆಡೆ ದರ್ಶನ್ ಗೆ ಬೆನ್ನು ನೋವು ತೀವ್ರವಾಗಿ ಕಾಡುತ್ತಿದ್ದು ಎದ್ದು ಓಡಾಡಲೂ ಕಷ್ಟವಾಗಿದೆ. ಅವರ ಪರಿಸ್ಥಿತಿ ನೋಡಿ ಸ್ಯಾಂಡಲ್ ವುಡ್ ನ ಸ್ನೇಹಿತರು ಬಳ್ಳಾರಿ ಜೈಲಿಗೆ ಬರುವುದಾಗಿ ಆಗ್ರಹಿಸುತ್ತಿದ್ದಾರಂತೆ. ಆದರೆ ಇವರೆಲ್ಲರಿಗೂ ದರ್ಶನ್ ಬರಬೇಡಿ ಎಂದು ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.

ನನಗೆ ಸದ್ಯದಲ್ಲೇ ಬೇಲ್ ಆಗುತ್ತದೆ ಎನ್ನುವ ವಿಶ್ವಾಸ ದರ್ಶನ್ ಗಿದೆ. ಆರೋಗ್ಯದ ನೆಪದಲ್ಲಿ ಜಾಮೀನು ಸಿಗಬಹುದು ಎಂದು ಅವರು ಭರವಸೆಯಲ್ಲಿದ್ದಾರೆ. ಹೀಗಾಗಿ ಸದ್ಯದಲ್ಲೇ ಬೆಂಗಳೂರಿಗೆ ಬರುತ್ತೇನೆ, ನೀವು ಯಾರೂ ಇಲ್ಲಿಗೆ ಬರಬೇಡಿ ಎಂದು ದರ್ಶನ್ ತಮ್ಮ ಸಿನಿ ಸ್ನೇಹಿತರಿಗೆ ಸಂದೇಶ ನೀಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಚಾಲೆಂಜಿಂಗ್ ದಿನ