Select Your Language

Notifications

webdunia
webdunia
webdunia
webdunia

ದರ್ಶನ್ ಹೇಳಿದ ಒಂದೇ ಮನವಿಗೆ ಮೂಟೆ ಮೂಟೆ ತಂದ ಅಭಿಮಾನಿಗಳು

ದರ್ಶನ್ ಹೇಳಿದ ಒಂದೇ ಮನವಿಗೆ ಮೂಟೆ ಮೂಟೆ ತಂದ ಅಭಿಮಾನಿಗಳು
ಬೆಂಗಳೂರು , ಮಂಗಳವಾರ, 21 ಜನವರಿ 2020 (09:26 IST)
ಬೆಂಗಳೂರು: ತಮ್ಮ ಹುಟ್ಟುಹಬ್ಬಕ್ಕೆ ಈ ಬಾರಿ ಕೇಕ್ ಹಾರ ತರುವುದನ್ನು ಬಿಟ್ಟು ನಿಮ್ಮ ಕೈಲಾದಷ್ಟು ಅಕ್ಕಿ, ಬೇಳೆ ತನ್ನಿ. ಇದನ್ನು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಕೊಡುವ ಕೆಲಸ ಮಾಡುತ್ತೇವೆ ಎಂದು ದರ್ಶನ್ ಮಾಡಿದ್ದೇ ತಡ. ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.


ದರ್ಶನ್ ಹೀಗೊಂದು ಕರೆ ಕೊಟ್ಟ ಬೆನ್ನಲ್ಲೇ ಅಭಿಮಾನಿಗಳು ತಮಗೆ ತೋಚಿದಷ್ಟು ಅಗತ್ಯ ವಸ್ತುಗಳನ್ನು ತಂದು ನೇರವಾಗಿ ದರ್ಶನ್ ಕೈಗೊಪ್ಪಿಸುವ ಮೂಲಕ ಅಭಿಮಾನ ತೋರಿಸಿದ್ದಾರೆ. ಫೆಬ್ರವರಿ 16 ಕ್ಕೆ ದರ್ಶನ್ ಬರ್ತ್ ಡೇ ಇದ್ದು ಅದಕ್ಕೆ ಕೆಲವು ದಿನಗಳ ಮೊದಲೇ ಅಭಿಮಾನಿಗಳು ತಮ್ಮ ಕೈಲಾದ ನೆರವು ನೀಡಲು ಮುಂದಾಗಿದ್ದಾರೆ. ದರ್ಶನ್ ಅಭಿಮಾನಿಗಳ ಈ ನೆರವಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವುಗಳಿಗೆ ನೆರವಾದ ರಾಕಿಂಗ್ ಸ್ಟಾರ್ ಯಶ್