Publish Date: Wed, 08 Sep 2021 (09:10 IST)
Updated Date: Wed, 08 Sep 2021 (09:34 IST)
ಬೆಂಗಳೂರು: ಹಿರಿಯ ನಟ ದೇವರಾಜ್ ಕುಟುಂಬಕ್ಕೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೂ ನಿಕಟ ಸಂಬಂಧವಿದೆ. ದರ್ಶನ್ ಕೂಡಾ ದೇವರಾಜ್ ಮನೆ ಮಗನಿದ್ದಂತೆ ಎಂದು ಈಗಾಗಲೇ ಪ್ರಜ್ವಲ್ ದೇವರಾಜ್ ಕೂಡಾ ಹೇಳಿಕೊಂಡಿದ್ದರು.
ಇದೀಗ ದೇವರಾಜ್ ಪತ್ನಿ ಚಂದ್ರಲೇಖಾ ಬರ್ತ್ ಡೇ ಸಂಭ್ರಮದಲ್ಲಿ ನಟ ದರ್ಶನ್ ಕೂಡಾ ಭಾಗಿಯಾದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವರಾಜ್ ನಿವಾಸದಲ್ಲಿ ಚಂದ್ರಲೇಖಾ ಬರ್ತ್ ಡೇ ಪಾರ್ಟಿ ಆಯೋಜನೆಯಾಗಿತ್ತು. ಈ ಪಾರ್ಟಿಗೆ ದರ್ಶನ್ ಕೂಡಾ ಆಗಮಿಸಿದ್ದಾರೆ. ದೇವರಾಜ್, ಪತ್ನಿ ಚಂದ್ರಲೇಖಾ, ಪುತ್ರರಾದ ಪ್ರಜ್ವಲ್ ಮತ್ತು ಪ್ರಣಮ್ ಜೊತೆ ದರ್ಶನ್ ಫೋಟೋಗೆ ಪೋಸ್ ನೀಡಿದ್ದಾರೆ.