Publish Date: Tue, 07 Sep 2021 (09:50 IST)
Updated Date: Tue, 07 Sep 2021 (10:08 IST)
ಬೆಂಗಳೂರು: ನಟ ವಿಜಯ್ ರಾಘವೇಂದ್ರ ವೆಬ್ ಸೀರೀಸ್ ಒಂದರಲ್ಲಿ ನಟಿಸಿದ್ದಾರೆ. ಈ ವೆಬ್ ಸೀರೀಸ್ ಗೆ ಹಕೂನ ಮಟಾಟ ಎಂದು ಟೈಟಲ್ ಇಡಲಾಗಿದೆ.
ಈ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ವೆಬ್ ಸರಣಿಯಾಗಿದೆ.
ಕಿಶೋರ್ ಮೂಡಬಿದ್ರೆ ಇದನ್ನು ನಿರ್ದೇಶಿಸಿದ್ದು, ಇದಕ್ಕೂ ಮೊದಲು ವಿಜಯ್ ರಾಘವೇಂದ್ರ ಜೊತೆಗೆ ಮಾಲ್ಗುಡಿ ಡೇಸ್ ಸಿನಿಮಾ ಮಾಡಿದ್ದರು. ಈಗ ಅದೇ ತಂಡ ವೆಬ್ ಸರಣಿ ನಿರ್ಮಿಸಿದ್ದು, ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.