Publish Date: Tue, 07 Sep 2021 (08:53 IST)
Updated Date: Tue, 07 Sep 2021 (09:10 IST)
ಬೆಂಗಳೂರು: ಎಲ್ಲರೂ ನಿರೀಕ್ಷಿಸುತ್ತಿರುವ ಕೆಜಿಎಫ್ 2 ಸಿನಿಮಾ ರಿಲೀಸ್ ಡೇಟ್ ಮುಂದಿನ ವರ್ಷಕ್ಕೆ ಹೋಗಿದೆ. ಕೆಜಿಎಫ್ 2 ಬಳಿಕ ಯಶ್ ಮುಂದಿನ ಚಿತ್ರ ಯಾವುದಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಲಾಕ್ ಡೌನ್ ಬಳಿಕ ಮುಫ್ತಿ ಖ್ಯಾತಿಯ ನರ್ತನ್ ನಿರ್ದೇಶನದಲ್ಲಿ ಯಶ್ ಮುಂದಿನ ಸಿನಿಮಾ ಘೋಷಣೆಯಾಗಲಿದೆ ಎಂಬ ಸುದ್ದಿಯಿತ್ತು. ಆದರೆ ಇದುವರೆಗೆ ಅನೌನ್ಸ್ ಆಗಿಲ್ಲ.
ಆದರೆ ಯಶ್ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ. ಮೂಲಗಳ ಪ್ರಕಾರ ಯಶ್ ಕೆಜಿಎಫ್ 2 ರಿಲೀಸ್ ಬಳಿಕವೇ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅವರು ಕೆಜಿಎಫ್ 2 ಕಡೆಗೆ ಮಾತ್ರ ಗಮನ ಹರಿಸಲಿದ್ದಾರೆ ಎನ್ನಲಾಗಿದೆ.