Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರಳತೆಗೆ ಇದುವೇ ಸಾಕ್ಷಿ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರಳತೆಗೆ ಇದುವೇ ಸಾಕ್ಷಿ!
ಬೆಂಗಳೂರು , ಸೋಮವಾರ, 6 ಸೆಪ್ಟಂಬರ್ 2021 (09:10 IST)
ಬೆಂಗಳೂರು: ಇತ್ತೀಚೆಗೆ ಸರ್ಕಾರಿ ಪ್ರಾಯೋಜಿತ ಸಾಕ್ಷ್ಯ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರೀಕರಣದ ನಡುವೆ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಪುನೀತ್ ಜನರ ಮಧ್ಯೆ ಸುಲಭವಾಗಿ ಬೆರೆಯುತ್ತಾರೆ. ಅದರಲ್ಲೂ ಊಟದ ವಿಚಾರಕ್ಕೆ ಬಂದರೆ ಯಾವುದೇ ಹಮ್ಮು ಬಿಮ್ಮು ತೋರಲ್ಲ ಎನ್ನುವುದು ಹಲವು ಬಾರಿ ಸಾಬೀತಾಗಿದೆ.

ಸಾಕ್ಷ್ಯ ಚಿತ್ರದ ಚಿತ್ರೀಕರಣದ ವೇಳೆ ಪುನೀತ್ ಗುಡ್ಡ ಗಾಡಿನಲ್ಲಿ ಮಣ್ಣಿನ ನೆಲದ ಮೇಲೆ ಇತರರೊಂದಿಗೆ ಕೂತು ಊಟ ಮಾಡುತ್ತಿರುವ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುನೀತ್ ಸರಳತೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಹಿಂದೆಯೂ ಒಮ್ಮೆ ಗುಡ್ಡಗಾಡಿನ ಜನರೊಂದಿಗೆ ಸಾಮಾನ್ಯರಂತೆ ಅವರೊಂದಿಗೆ ಕೂತು ಊಟ ಮಾಡಿದ್ದ ಫೋಟೋಗಳು ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಪುನೀತ್ ಅದೇ ರೀತಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ವಿರುದ್ಧ ಸಿಡಿದೆದ್ದ ಡಾ.ರಾಜ್-ಡಾ.ವಿಷ್ಣುವರ್ಧನ್ ಅಭಿಮಾನಿಗಳು