Select Your Language

Notifications

webdunia
webdunia
webdunia
webdunia

ನಟಿ ಮಿಲನಾ ನಾಗರಾಜ್ ಈಗ ಗಾಯಕಿ!

ನಟಿ ಮಿಲನಾ ನಾಗರಾಜ್ ಈಗ ಗಾಯಕಿ!
ಬೆಂಗಳೂರು , ಭಾನುವಾರ, 5 ಸೆಪ್ಟಂಬರ್ 2021 (09:06 IST)
ಬೆಂಗಳೂರು: ಲವ್ ಮಾಕ್ಟೇಲ್ ಖ್ಯಾತಿಯ ನಟಿ ಮಿಲನಾ ನಾಗರಾಜ್ ಈಗ ಹಾಡಿಗೂ ಸೈ ಎಂದಿದ್ದಾರೆ. ಪತಿ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸುತ್ತಿರುವ ಲವ್ ಮಾಕ್ಟೇಲ್ 2 ನೇ ಭಾಗದಲ್ಲಿ ಮಿಲನಾ ಹಾಡೊಂದಕ್ಕೆ ಧ‍್ವನಿ ನೀಡಿದ್ದಾರೆ.


ಲವ್ ಮಾಕ್ಟೇಲ್ 2 ಸಿನಿಮಾದ ಹಾಡುಗಳ ಧ್ವನಿ ಮುದ್ರಣ ಕೆಲಸ ಭರದಿಂದ ನಡೆಯುತ್ತಿದೆ. ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಸದ್ಯದಲ್ಲೇ ಮತ್ತೊಂದು ಹಾಡನ್ನು ರೆಡಿ ಮಾಡಿ ಜನರೆದುರಿಗೆ ತರಲಿದ್ದಾರೆ.

 ಈ ಹಾಡಿಗೆ ಮಿಲನಾ ಕೋರಸ್ ಆಗಿ ಧ‍್ವನಿ ನೀಡಿದ್ದಾರೆ. ಈ ವಿಡಿಯೋಗಳನ್ನು ಹಂಚಿಕೊಂಡಿರುವ ಡಾರ್ಲಿಂಗ್ ಕೃಷ್ಣ, ತಮ್ಮ ಪತ್ನಿ ಮಿಲನಾ ಗಾಯಕಿಯಾಗುತ್ತಿದ್ದಾರೆ ಎಂದು ಸಂತೋಷದಿಂದಲೇ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ತಿಂಗಳು ಬಿಡುಗಡೆಯಾಗಲಿರುವ ಸ್ಯಾಂಡಲ್ ವುಡ್ ಸಿನಿಮಾಗಳು