Publish Date: Sun, 05 Sep 2021 (08:56 IST)
Updated Date: Sun, 05 Sep 2021 (09:05 IST)
ಬೆಂಗಳೂರು: ಸೆಪ್ಟೆಂಬರ್ ತಿಂಗಳು ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಸಿನಿಮಾಗಳದ್ದೇ ಕಾರುಬಾರು ನಡೆಯಲಿದೆ.
ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡದ ಕಾರಣ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಹೊಸಬರ ಚಿತ್ರಗಳು ಈ ತಿಂಗಳು ತೆರೆಗೆ ಬರಲಿದೆ.
ಇದೇ ವಾರಂತ್ಯಕ್ಕೆ ಲೂಸ್ ಮಾದ ಯೋಗಿ ಅಭಿನಯದ ಲಂಕೆ ಬಿಡುಗಡೆಯಾಗಲಿದೆ. ಅದರ ಜೊತೆಗೆ ಓಶೋ, ಆಶ್ಚರ್ಯ ಎಂಬ ಹೊಸಬರ ಎರಡು ಸಿನಿಮಾಗಳು ಬಿಡುಗಡೆಯಾಗಲಿದೆ. ಸೆ.17 ರಂದು ಚಡ್ಡಿದೋಸ್ತ್, ಜಿಗ್ರಿದೋಸ್ತ್ ಎನ್ನುವ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಈ ತಿಂಗಳು ಹೊಸಬರ ಸಿನಿಮಾಗಳ ಕಾಲ ಎನ್ನಬಹುದು.