Publish Date: Sat, 04 Sep 2021 (09:24 IST)
Updated Date: Sat, 04 Sep 2021 (09:32 IST)
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿ ಪಟು ರವಿಕುಮಾರ್ ದಹಿಯಾ ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ!
ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ರವಿಕುಮಾರ್ ದಹಿಯಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಿಂಬಾಲಕರಾಗಿದ್ದಾರೆ. ಇದು ಪುನೀತ್ ಅಭಿಮಾನಿಗಳಲ್ಲಿ ಪುಳಕವುಂಟು ಮಾಡಿದೆ.
ಇದುವರೆಗೆ ಬೇರೆ ಭಾಷೆಗಳಲ್ಲಿ ನಟಿಸದೇ ಹೋದರೂ ಪವರ್ ಸ್ಟಾರ್ ಎಂದರೆ ಉತ್ತರ ಭಾರತೀಯರಿಗೂ ಚಿರಪರಿಚಿತ. ಹೀಗಾಗಿ ಪುನೀತ್ ರನ್ನು ರವಿಕುಮಾರ್ ಫಾಲೋ ಮಾಡಲು ಆರಂಭಿಸಿದ್ದಾರೆ.