Publish Date: Fri, 03 Sep 2021 (11:12 IST)
Updated Date: Fri, 03 Sep 2021 (11:14 IST)
ಬೆಂಗಳೂರು: ಮೇಘನಾ ರಾಜ್-ಚಿರಂಜೀವಿ ಸರ್ಜಾ ಪುತ್ರ ಜ್ಯೂನಿಯರ್ ಚಿರುಗೆ ಕೊನೆಗೂ ಹೆಸರು ಫಿಕ್ಸ್ ಆಗಿದೆ. ಮೇಘನಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಮೂಲಕ ಮಗನ ಹೆಸರು ಬಹಿರಂಪಡಿಸಿದ್ದಾರೆ.
ಜ್ಯೂನಿಯರ್ ಚಿರುಗೆ 1 ವರ್ಷ ತುಂಬಲು ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಅದಕ್ಕೆ ಮೊದಲು ಮುದ್ದು ಮಗನ ಹೆಸರನ್ನು ಸರ್ಜಾ ಫ್ಯಾಮಿಲಿ ಬಹಿರಂಗಪಡಿಸಿದೆ. ಚಿರು ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ.
ಇದರೊಂದಿಗೆ ಇದುವರೆಗೆ ಜ್ಯೂನಿಯರ್ ಚಿರು ಎಂದೇ ಕರೆಸಿಕೊಳ್ಳುತ್ತಿದ್ದ ಪುಟಾಣಿಗೆ ವಿಶೇಷ ಹೆಸರೊಂದು ಫಿಕ್ಸ್ ಆಗಿದೆ. ಅಭಿಮಾನಿಗಳ ಬಹಳ ದಿನಗಳ ಪ್ರಶ್ನೆಗೂ ಉತ್ತರ ಸಿಕ್ಕಿದೆ.