Publish Date: Fri, 03 Sep 2021 (09:40 IST)
Updated Date: Fri, 03 Sep 2021 (09:51 IST)
ಬೆಂಗಳೂರು: ಈಗಷ್ಟೇ ಕೊರೋನಾ ಎರಡನೇ ಅಲೆಯಿಂದ ಚೇತರಿಸಿಕೊಂಡು ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಹಾಗಿದ್ದರೂ ಸಿನಿಮಾ ರಿಲೀಸ್ ಇನ್ನೂ ಶುರುವಾಗಿಲ್ಲ.
ಆದರೆ ಅದಕ್ಕೂ ಮೊದಲೇ ಸ್ಯಾಂಡಲ್ ವುಡ್ ಗೆ ಮತ್ತೊಂದು ಲಾಕ್ ಡೌನ್ ಭಯ ಶುರುವಾಗಿದೆ. ಕೊರೋನಾ ಮೂರನೇ ಅಲೆಯ ಭೀತಿಯಲ್ಲಿರುವ ಕರ್ನಾಟಕದಲ್ಲಿ ಪ್ರಕರಣಗಳು ಹೆಚ್ಚಾದರೆ ಮತ್ತೆ ಲಾಕ್ ಡೌನ್ ಸಂಕಷ್ಟ ಎದುರಾಗಬಹುದು.
ಇದರಿಂದ ಈಗಾಗಲೇ ಆರಂಭವಾಗಿರುವ ಸಿನಿಮಾ ಶೂಟಿಂಗ್ ಗಳು ನಿಂತುಹೋಗಬಹುದು ಎಂಬ ಭಯವಿದೆ. ಘೋಷಣೆಯಾದ ಸಿನಿಮಾಗಳೂ ರಿಲೀಸ್ ಡೇಟ್ ಮುಂದೂಡಿ ಕೂತಿದೆ. ಇನ್ನು, ಶೂಟಿಂಗ್ ಗಳನ್ನೂ ಬೇಗನೇ ಮುಗಿಸಲಾಗುತ್ತಿದೆ. ಮತ್ತೊಂದು ಲಾಕ್ ಡೌನ್ ಆದರೆ ಚಿತ್ರರಂಗಕ್ಕಾಗುವ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಸ್ಯಾಂಡಲ್ ವುಡ್ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.