Publish Date: Mon, 06 Sep 2021 (17:29 IST)
Updated Date: Mon, 06 Sep 2021 (17:30 IST)
ಬೆಂಗಳೂರು: ನಟಿ ರಾಧಿಕಾ ಪಂಡಿತ್-ರಾಕಿಂಗ್ ಸ್ಟಾರ್ ಯಶ್ ಮುದ್ದಿನ ಮಗ ಯಥರ್ವ್ ಯಶ್ ಲೇಟೆಸ್ಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಧಿಕಾ ತಮ್ಮಿಬ್ಬರು ಮಕ್ಕಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಯಥರ್ವ್ ಗೂಗಲ್ ಅಸಿಸ್ಟೆಂಟ್ ಗೆ ಹೇ ಗೂಗಲ್ ಪ್ಲೇ ಬೇಬಿ ಸಾಂಗ್ ಎಂದು ಆವಾಝ್ ಹಾಕುತ್ತಾನೆ. ಬಳಿಕ ಅಕ್ಕ ಐರಾ ಕೂಡಾ ಎಂಟ್ರಿ ಕೊಡುತ್ತಾಳೆ. ಇಬ್ಬರೂ ಸೇರಿಕೊಂಡು ಭರ್ಜರಿ ಸ್ಟೆಪ್ ಹಾಕುವ ವಿಡಿಯೋವನ್ನು ರಾಧಿಕಾ ಪ್ರಕಟಿಸಿದ್ದಾರೆ.
ಈ ವಿಡಿಯೋ ನೋಡಿ ಅಕ್ಕ-ತಮ್ಮನ ಡ್ಯಾನ್ಸ್ ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ನನಗೆ ಇದೇ ಮ್ಯೂಸಿಕ್ ಆಗಿದೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.