Select Your Language

Notifications

webdunia
webdunia
webdunia
webdunia

ಮಗ ವಿನೀಶ್ ನನ್ನು ತಬ್ಬಿಕೊಂಡು ಅತ್ತ ನಟ ದರ್ಶನ್: ಇದೆಲ್ಲಾ ಯಾಕ್ ಬೇಕಿತ್ತು

Darshan Thoodudeepa-Vineesh
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನಿನ್ನೆ ತಮ್ಮ ಮಗ ವಿನೇಶ್ ನನ್ನು ತಬ್ಬಿಕೊಂಡು ಹಗುರವಾಗಿದ್ದಾರೆ ಎನ್ನಲಾಗಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೊನ್ನೆಯಷ್ಟೇ ಪತಿಯ ರಕ್ಷಣೆಗಾಗಿ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ಚಂಡಿಕಾಹೋಮ ಮಾಡಿಸಿದ್ದರು. ದೇವಾಲಯದ ಪ್ರಸಾದವನ್ನು ಕೊಡಲೆಂದೇ ನಿನ್ನೆ ವಿಜಯಲಕ್ಷ್ಮಿ, ಪುತ್ರ ವಿನೇಶ್, ಸಹೋದರ ದಿನಕರ್ ತೂಗುದೀಪ ಜೈಲಿಗೆ ಭೇಟಿ ನೀಡಿದ್ದರು.

ಈ ವೇಳೆ ಮಗನನ್ನು ಕಂಡು ದರ್ಶನ್ ಭಾವುಕರಾಗಿದ್ದಾರೆ. ವಿನೀಶ್ ನನ್ನು ತಬ್ಬಿಕೊಂಡು ಮನಸ್ಸಿನ ಭಾರ ಹಗುರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೊದಲೂ ವಿನೀಶ್ ನೋಡಿ ದರ್ಶನ್ ಭಾವುಕರಾಗಿ ಕಣ್ಣೀರು ಸುರಿಸಿದ್ದರು. ಮಗ ವಿನೀಶ್ ಎಂದರೆ ದರ್ಶನ್ ಗೆ ಪಂಚಪ್ರಾಣ. ಈಗ ಜೈಲಿನಲ್ಲಿರುವ ತಂದೆಯನ್ನು ನೋಡಿ ವಿನೀಶ್ ಕೂಡಾ ಬೇಸರದಲ್ಲಿದ್ದಾರೆ.

ನಿನ್ನೆಯೂ ಮಗನನ್ನು ನೋಡಿ ಬೇಸರಗೊಂಡಿದ್ದಾರೆ. ದರ್ಶನ್ ಪರಿಸ್ಥಿತಿ ನೋಡಿ ಜನ ಇಂತಹ ಪರಿಸ್ಥಿತಿ ಯಾಕೆ ಮೈಮೇಲೆಳೆದುಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಗೆ ಊಟ, ಹಾಸಿಗೆ ಅರ್ಜಿಯನ್ನು ಹಿಂಪಡೆದ ವಕೀಲರು: ಕಾರಣವೇನು