Select Your Language

Notifications

webdunia
webdunia
webdunia
webdunia

ದರ್ಶನ್ ಗೆ ಊಟ, ಹಾಸಿಗೆ ಅರ್ಜಿಯನ್ನು ಹಿಂಪಡೆದ ವಕೀಲರು: ಕಾರಣವೇನು

Darshan Thoogudeepa

Krishnaveni K

ಬೆಂಗಳೂರು , ಸೋಮವಾರ, 29 ಜುಲೈ 2024 (17:31 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಊಟ, ಹಾಸಿಗೆ, ಪುಸ್ತಕ ಇತ್ಯಾದಿ ಸೌಕರ್ಯಗಳನ್ನು ನೀಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಅವರ ಪರ ವಕೀಲರು ಹಿಂಪಡೆದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಜೈಲೂಟ ಒಗ್ಗುತ್ತಿಲ್ಲ. ಮನೆ ಆಹಾರಕ್ಕೆ ಅವಕಾಶ ಕೊಡಿ ಎಂದು ಅವರ ಪರ ವಕೀಲರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪ್ರಕರಣ ವಿಚಾರಣೆ ಹಂತದಲ್ಲಿತ್ತು.

ಆದರೆ ಈಗ ಏಕಾಏಕಿ ವಕೀಲರು ಅರ್ಜಿ ಹಿಂಪಡೆದಿದ್ದಾರೆ. ಇದಕ್ಕೆ ತಾಂತ್ರಿಕ ಕಾರಣ ನೀಡಿದ್ದಾರೆ. ಈ ಮೊದಲು ದರ್ಶನ್ ಗೆ ಮನೆ ಆಹಾರಕ್ಕೆ ಅವಕಾಶ ನೀಡಿದರೆ ಇತರೆ ಕೈದಿಗಳೂ ಅದನ್ನೇ ಕೇಳಬಹುದು ಎಂದು ಸರ್ಕಾರೀ ಅಭಿಯೋಜಕರು ವಾದ ಮಂಡಿಸಿದ್ದರು. ಈ ಹಿನ್ನಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಅರ್ಜಿ ತಳ್ಳಿ ಹಾಕಿತ್ತು.

ಆದರೆ ಈಗ ತಾಂತ್ರಿಕ ಕಾರಣಗಳನ್ನು ಸರಿಪಡಿಸಿಕೊಂಡು ವಕೀಲರು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಆಗಸ್ಟ್ 4 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಚಾಪ್ಟರ್ 1 ಶೂಟಿಂಗ್ ಪುನರಾರಂಭ