Webdunia - Bharat's app for daily news and videos

Install App

Darshan: ದೇಶದಲ್ಲಿ ಆಯ್ತು, ಈಗ ವಿದೇಶಕ್ಕೆ ಅನುಮತಿ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ ದರ್ಶನ್

Krishnaveni K
ಬುಧವಾರ, 28 ಮೇ 2025 (11:49 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜಾಮೀನು ಪಡೆದು ಹೊರಬಂದ ಬಳಿಕ ನಟ ದರ್ಶನ್ ತಮ್ಮ ದೇಶದಾದ್ಯಂತ ಕೋರ್ಟ್ ಅನುಮತಿ ಪಡೆದು ಸುತ್ತಾಡಿದ್ದಾರೆ. ಇದೀಗ ವಿದೇಶಕ್ಕೆ ಹೋಗಲು ಅವಕಾಶ ಕೊಡಿ ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ರೆಗ್ಯುಲರ್ ಜಾಮೀನು ಪಡೆದು ಹೊರಬಂದಿದ್ದಾರೆ. ಇದನ್ನು ಪ್ರಶ್ನಿಸಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿ ಈಗಲೂ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ.

ಈ ನಡುವೆ ದರ್ಶನ್ ಶೂಟಿಂಗ್ ನಿಮಿತ್ತ ರಾಜಸ್ಥಾನ್ ವರೆಗೂ ಹೋಗಿಬಂದಿದ್ದರು. ಇದಕ್ಕೆ ಕೋರ್ಟ್ ಅನುಮತಿಯನ್ನೂ ಪಡೆದುಕೊಂಡಿದ್ದರು. ಇದೀಗ ವಿದೇಶಕ್ಕೆ ಹೋಗಲು ಅನುಮತಿ ಕೊಡಿ ಎಂದು ಕೋರ್ಟ್ ಕದ ಬಡಿದಿದ್ದಾರೆ.

ಡೆವಿಲ್ ಸಿನಿಮಾ ಶೂಟಿಂಗ್ ಗಾಗಿ ಯುರೋಪ್ ಮತ್ತು ದುಬೈಗೆ ಹೋಗಬೇಕಿದೆ. ಜೂನ್ 1 ರಿಂದ 25 ರವರೆಗೆ ಹೋಗಲು ಅವಕಾಶ ಕೊಡಿ ಎಂದು ದರ್ಶನ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಆದರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪ್ರಮುಖ ಮತ್ತು ಪ್ರಭಾವೀ ಆರೋಪಿ. ಅವರನ್ನು ವಿದೇಶಕ್ಕೆ ತೆರಳಲು ಬಿಟ್ಟರೆ ವಾಪಸ್ ಬರಲ್ಲ. ಹೀಗಾಗಿ ಅವಕಾಶ ಕೊಡಬಾರದು ಎಂದು ವಿಶೇಷ ಅಭಿಯೋಜಕ ಪ್ರಸನ್ನಕುಮಾರ್ ಪ್ರತಿ ಅರ್ಜಿ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಬೀಚ್‌ನಲ್ಲಿ ಪತಿ ಜತೆ ಬರ್ತಡೇ ಸೆಲೆಬ್ರೇಟ್‌

ಭಾಗ್ಯಲಕ್ಷ್ಮೀ ಸೀರಿಯಲ್‌, ಎಲ್ಲ ಗೊತ್ತಿರುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ, ಟ್ರೋಲ್‌

ಎಕ್ಕ ಮೂವಿ ಹೇಗಿದೆ: ಫಸ್ಟ್ ಹಾಫ್ ನೋಡಿದ ಪ್ರೇಕ್ಷಕರು ಏನಂತಿದ್ದಾರೆ

ಆಂಕರ್ ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಫೋಟೋ ವೈರಲ್

ಸುಪ್ರೀಂಕೋರ್ಟ್ ಕೇಳಿದ ಅದೊಂದು ಪ್ರಶ್ನೆಗೆ ದರ್ಶನ್ ಆಂಡ್ ಗ್ಯಾಂಗ್ ಗೆ ನಡುಕ ಶುರು

ಮುಂದಿನ ಸುದ್ದಿ
Show comments