Select Your Language

Notifications

webdunia
webdunia
webdunia
webdunia

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

Pavithra Gowda

Krishnaveni K

ಬೆಂಗಳೂರು , ಮಂಗಳವಾರ, 20 ಮೇ 2025 (14:33 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೋರ್ಟ್ ಮುಂದೆ ಹೊಸ ಬೇಡಿಕೆಯಿಟ್ಟಿದ್ದು ಇದಕ್ಕೆ ಕೋರ್ಟ್ ಕೂಡಾ ಒಪ್ಪಿಗೆ ನೀಡಿದೆ.

ಇಂದು ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳೂ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾಗುವಾಗ ತಿಂಗಳಿಗೊಮ್ಮೆ ಕೋರ್ಟ್ ಮುಂದೆ ಹಾಜರಾಗಲು ಸೂಚಿಸಲಾಗಿತ್ತು.

ಅದರಂತೆ ಇಂದು ಮತ್ತೊಮ್ಮೆ ಎಲ್ಲಾ ಆರೋಪಿಗಳೂ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಇಂದು ನ್ಯಾಯಾಧೀಶರ ಬಳಿ ಪವಿತ್ರಾ ಗೌಡ 15 ದಿನಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ಕೇಳಿದ್ದರು. ಅದಕ್ಕೆ ಕೋರ್ಟ್ ಒಪ್ಪಿಗೆ ನೀಡಿದೆ.

ಎ3 ಪವನ್ ಇಂದು ವಿಚಾರಣೆಗೆ ಗೈರಾಗಿದ್ದರು. ಎ11 ನಾಗರಾಜ್ ಗೆ ಹೊಸಪೇಟೆಗೆ ಹೋಗಲು ಅನುಮತಿ ನೀಡಲಾಗಿದೆ. ಮುಂದಿನ ವಿಚಾರಣೆಗೆ ಕಾಲಾವಕಾಶ ಕೇಳಿದ್ದರಿಂದ ಕೋರ್ಟ್ ಜುಲೈ 10 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Darshan Pavithra Gowda: ದರ್ಶನ್ ಜೊತೆ ಮತ್ತೆ ಪವಿತ್ರಾ ಗೌಡ: ನಾ ನಿನ್ನ ಬಿಡಲಾರೆ ಪಾರ್ಟ್ 2 ನಾ ಎಂದ ನೆಟ್ಟಿಗರು