ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಇಂದು ಕೋರ್ಟ್ ಗೆ ಹಾಜರಾದ ಪವಿತ್ರಾ ಗೌಡ ನಟ ದರ್ಶನ್ ಕೈ ಹಿಡಿದುಕೊಂಡು ಫೋನ್ ನಂಬರ್ ಗಾಗಿ ಹಠ ಹಿಡಿದರು ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಇದು ನಾ ನಿನ್ನ ಬಿಡಲಾರೆ ಪಾರ್ಟ್ 2 ಎಂದು ಟ್ರೋಲ್ ಮಾಡಿದ್ದಾರೆ.
ಕೋರ್ಟ್ ಆದೇಶದಂತೆ ಇಂದು ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ಕೋರ್ಟ್ ಹಾಲ್ ನಲ್ಲೂ ದರ್ಶನ್ ಪಕ್ಕವೇ ಪವಿತ್ರಾ ನಿಂತಿದ್ದರು ಎನ್ನಲಾಗಿದೆ. ಇನ್ನು ಕೋರ್ಟ್ ನಿಂದ ಹೊರಬರುವಾಗ ಪವಿತ್ರಾ ಗೌಡ, ದರ್ಶನ್ ಕೈ ಹಿಡಿದುಕೊಂಡೇ ಹೊರಬಂದಿದ್ದಾರೆ ಎನ್ನಾಗಿದೆ. ಜೊತೆಗೆ ದರ್ಶನ್ ಬಳಿ ಫೋನ್ ನಂಬರ್ ಗಾಗಿಯೂ ಹಠ ಹಿಡಿದರು ಎಂಬ ಸುದ್ದಿಯಿದೆ.
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇದು ನಾ ನಿನ್ನ ಬಿಡಲಾರೆ ಪಾರ್ಟ್ 2 ಎಂದಿದ್ದಾರೆ. ನಿನ್ನೆಯಷ್ಟೇ ಪತ್ನಿ ವಿಜಯಲಕ್ಷ್ಮಿ ಜೊತೆ ದರ್ಶನ್ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಇನ್ನಾದರೂ ಪವಿತ್ರಾ ಗೌಡರಿಂದ ದೂರವಿರಿ ಎಂದು ಕೆಲವರು ಸಲಹೆ ನೀಡಿದ್ದಾರೆ.