ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ದರ್ಶನ್ ಸಂಪೂರ್ಣ ಬದಲಾಗಿದ್ದಾರೆ, ಪವಿತ್ರಾ ಗೌಡ ಸಹವಾಸಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಕೋರ್ಟ್ ಗೆ ಹಾಜರಾದಾಗ ಮುಖಾಮುಖಿಯಾದ ದರ್ಶನ್ ಬಳಿ ಹಠ ಹಿಡಿದು ಪವಿತ್ರಾ ಫೋನ್ ನಂಬರ್ ಪಡೆದುಕೊಂಡಿದ್ದಾಳೆ ಮತ್ತು ದರ್ಶನ್ ಕೈ ಹಿಡಿದು ನಡೆದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
ಕೋರ್ಟ್ ಆದೇಶದಂತೆ ಇಂದು ಎಲ್ಲಾ 17 ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಬೇಕಿತ್ತು. ಅದರಂತೆ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಕೋರ್ಟ್ ಗೆ ಹಾಜರಾಗಿದ್ದಾರೆ. ಕೋರ್ಟ್ ಗೆ ಬಂದ ದರ್ಶನ್ ಮುಂದೆ ಪವಿತ್ರಾ ಫೋನ್ ನಂಬರ್ ಗಾಗಿ ಹಠ ಹಿಡಿದಿದ್ದಾಳೆ.
ಜೈಲಿನಿಂದ ಹೊರಬಂದ ಬಳಿಕ ಪವಿತ್ರಾ ಗೌಡರಿಂದ ದರ್ಶನ್ ದೂರವಿದ್ದರು ಎನ್ನಲಾಗಿದೆ. ಆದರೆ ಇಂದು ಕೋರ್ಟ್ ಗೆ ಹಾಜರಾದಾಗ ಲಿಫ್ಟ್ ನಲ್ಲಿ ತೆರಳುವಾಗ ಹಠ ಹಿಡಿದು ಫೋನ್ ನಂಬರ್ ಪಡೆದಿದ್ದಾಳೆ. ದರ್ಶನ್ ಕೈ ಹಿಡಿದು ಪವಿತ್ರಾ ಫೋನ್ ನಂಬರ್ ಗಾಗಿ ಹಠ ಹಿಡಿದಾಗ ವಿಧಿಯಿಲ್ಲದೇ ಪವಿತ್ರಾ ಫೋನ್ ತೆಗೆದುಕೊಂಡು ದರ್ಶನ್ ಡಯಲ್ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.