ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ನಟ ಅಜಿತ್ ಕುಮಾರ್ ಜಿಟಿ4 ಯುರೋಪಿಯನ್ ಸೀರೀಸ್ ರೇಸ್ ವೇಳೆ ಅಪಘಾತಕ್ಕೀಡಾಗಿದ್ದಾರೆ. ಅದೃಷ್ಟವಶಾತ್ ಅಜಿತ್ ಕುಮಾರ್ ಸುರಕ್ಷಿತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
GT4 ಯುರೋಪಿಯನ್ ಸರಣಿಯ ನಂತರ ಅಜಿತ್ ಕುಮಾರ್ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.
ಪ್ರಸ್ತುತ ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ಜಿಟಿ 4 ಯುರೋಪಿಯನ್ ಸಿರೀಸ್ ಕಾರ್ ರೇಸ್‌ನ ಭಾಗವಾಗಿರುವ ಅಜಿತ್ ಕುಮಾರ್, ರೇಸ್ ವೇಳೆ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರು ಚಲಾಯಿಸುತ್ತಿದ್ದಾಗ ಅವರ ಕಾರಿನ ಟೈರ್ ಒಡೆದು ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದು ಈ ಘಟನೆ ನಡೆದಿದೆ ಎನ್ನಲಾಗಿದೆ.
ಪೋರ್ಷೆ ರೇಸಿಂಗ್ ತಂಡದ ಭಾಗವಾಗಿ ಅಜಿತ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಲೆಗ್ ರೇಸ್ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.