ಬೆಂಗಳೂರು: ಕಾರ್ ರೇಸಿಂಗ್‌ನಲ್ಲಿ ನಟ ಅಜಿತ್ ಕುಮಾರ್ ಅವರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕಳೆದ ತಿಂಗಳು ದುಬೈನಲ್ಲಿ ನಡೆದ ಕಾರ್ ರೇಸ್ ನಲ್ಲಿ ಇವರ ತಂಡ ಭಾಗವಹಿಸಿತ್ತು. ಆದರೆ ಕೊನೆಯಾ ರೇಸಿಂಗ್‌ಗೂ ಮುನ್ನಾ ನಡೆದ ಅಭ್ಯಾಸದ ವೇಳೇ ಅಜಿತ್ ಅವರ ಕಾರು ಅಪಘಾತಕ್ಕೀಡಾಯಿತು. ಆದರೆ ಯಾವುದೇ ಗಾಯವಾಗದೇ ಅದೃಷ್ಟವಶಾತ್ ಪಾರಾಗಿದ್ದರು.
ಇದೀಗ ಮತ್ತೇ ಅಜಿತ್ ಕುಮಾರ್ ಸ್ಪೇನ್ ನಲ್ಲಿ ಕಾರ್ ರೇಸ್ ನಲ್ಲಿ ಭಾಗವಹಿಸಿದ್ದಾರೆ. ಎರಡು ದಿನಗಳ ಹಿಂದೆ ವೇಲೆನ್ಸಿಯಾದಲ್ಲಿ ನಡೆದ ರೇಸ್ ವೇಳೆ ಅವರು ಮತ್ತೊಂದು ಕಾರನ್ನು ಹಿಂದಿಕ್ಕಲು ಯತ್ನಿಸಿ ಅಪಘಾತಕ್ಕೀಡಾಗಿದ್ದರು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅವರು ಅಜಿತ್ ಅವರ ಕಾರಿನಲ್ಲಿರುವ ಕ್ಯಾಮರಾದಲ್ಲಿ ದಾಖಲಾಗಿರುವ ಅಪಘಾತದ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅವರು ಅಜಿತ್ ಅವರ ಪರಿಶ್ರಮವನ್ನು ಶ್ಲಾಘಿಸಿದರು, ಅವರು ಯಾವುದೇ ಗಾಯಗಳಿಲ್ಲದೆ ಹೊರಹೊಮ್ಮಿದರು ಮತ್ತು ರೇಸಿಂಗ್ ಅನ್ನು ಮುಂದುವರಿಸುತ್ತಾರೆ ಎಂದು ಹೇಳಿದರು.ಸ